ಮೈಸೂರು

ಮೊಹಮ್ಮದ್ ಕುಂಞಿ ಅವರಿಗೆ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬ್ಯಾರಿ ವೆಲ್ ಫೇರ್ ಅಸೋಸಿಯೇಷನ್, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಜ.21 ರಂದು ಇನ್ಸಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಖ‍್ಯಾತ ಕಥೆಗಾರ ಬೊಳುವಾರು ಮೊಹಮ್ಮದ್ ಕುಂಞಿ ಅವರಿಗೆ ಸನ್ಮಾನ ಹಾಗೂ ಅವರ ಜತೆ ‘ಸಾಹಿತ್ಯ ಸಂವಾದ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ‍್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪತ್ರಕರ್ತರಾದ ಬಿ.ಎಂ.ಹನೀಫ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ವಿಶ್ರಾಂತ ಪ್ರಾಧ‍್ಯಾಪಕ ಡಾ.ಹೆಚ್.ಎಂ.ಕುಮಾರಸ್ವಾಮಿ ಬೊಳುವಾರ ರ ‘ಸ್ವಾತಂತ್ರ್ಯದ ಓಟ’ ಕೃತಿ ಕುರಿತು ಮಾತನಾಡಲಿದ್ದಾರೆ. ಬ್ಯಾರಿ ವೆಲ್ ಫೇರ್ ಅಸೋಸಿಯೇಷನ್ ನ ಮೈಸೂರು ಜಿಲ್ಲಾಧ‍್ಯಕ್ಷ ಮೊಹಮ್ಮದ್ ಹಾಜಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾರಿ ವೆಲ್ ಫೇರ್ ಅಸೋಸಿಯೇಷನ್ ನ ಅಧ‍್ಯಕ್ಷ ಮಹಮದ್ ಹಾಜಿ, ಕಾರ್ಯಕಾರಿ ಸದಸ್ಯ ಟಿ.ಎಂ.ಬೇರಿ, ಕಾರ್ಯದರ್ಶಿ ಅಬ್ದುಲ್ ಹಮೀದ್ ಅನ್ಸಾರಿ ಹಾಜರಿದ್ದರು.

Leave a Reply

comments

Related Articles

error: