ಮೈಸೂರು

ಧೃವನಾರಾಯಣ್ ಮತ್ತೊಮ್ಮೆ ಸಂಸದರಾಗಲಿ : ಶಾಸಕ ಎಂ.ಅಶ್ವಿನ್ ಕುಮಾರ್

ಮೈಸೂರು,ಫೆ.23:- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧೃವನಾರಾಯಣ್ ಮತ್ತೊಮ್ಮೆ ಸಂಸದರಾಗಬೇಕೆಂದು ಟಿ.ನರಸೀಪುರ ಶಾಸಕ ಎಂ.ಅಶ್ವಿನ್ ಕುಮಾರ್  ಆಶಿಸಿದರು.

ನಿನ್ನೆ ಸಂಸದ ಆರ್.ಧೃವನಾರಾಯಣ್ ಟಿ.ನರಸೀಪುರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಆದರ್ಶ ಗ್ರಾಮ ಯೋಜನೆಯಡಿ 45 ಲಕ್ಷ ರೂ ವೆಚ್ಚದಲ್ಲಿ ಮಲಿಯೂರು,ಚಿಕ್ಕಲಕ್ಷ್ಮೀಪುರ, ಕೆಬ್ಬೆ,ಸೋಸಲೆ, ಸೇರಿದಂತೆ ವಿವಿಧ ಗ್ರಾಮಗಳು ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿದೆ. ಮೂಲಭೂತ ಸೌಲಭ್ಯಗಳನ್ನು ಸರಿಯಾದ ರೀತಿ ಬಳಸಿಕೊಳ್ಳುವಂತೆ ಧೃವನಾರಾಯಣ್ ಮನವಿ ಮಾಡಿದರು.

ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ಎಸ್ಸಿ,ಎಸ್ಟಿ ಕಾಯ್ದೆ ತರುವ ಮೂಲಕ ಹಿಂದುಳಿದ ಜನಾಂಗದ ಅಭಿವೃದ್ಧಿ ಮಾಡಲಾಗಿತ್ತು. ಅದೇ ರೀತಿ ಮೈತ್ರಿ ಸರ್ಕಾರವು ಕೂಡ ಮುಂದುವರಿದಿದೆ.ಹಿಂದುಳಿದ ಜನಾಂಗವನ್ನು ಮುಖ್ಯ ವಾಹಿನಿಗೆ ತರುವುದೇ ಮೂಲ ಉದ್ದೇಶವಾಗಿದೆ ಎಂದ ಶಾಸಕ ಅಶ್ವಿನ್ ಕುಮಾರ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಧೃವನಾರಾಯಣ್ ಸಂಸದರಾಗಲಿ ಎಂದು ಶುಭ ಹಾರೈಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: