ಪ್ರಮುಖ ಸುದ್ದಿ

ಪ್ರೇಮ ವೈಫಲ್ಯ ಹಿನ್ನೆಲೆ : ಪ್ರೇಯಸಿ ಜತೆ ಪ್ರಿಯಕರ ಸೈನೈಡ್ ಸೇವಿಸಿ ಆತ್ಮಹತ್ಯೆಗೆ ಶರಣು

ರಾಜ್ಯ(ತುಮಕೂರು)ಫೆ.23:- ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ  ಯುವಕನೋರ್ವ ತನ್ನ ಪ್ರೇಯಸಿ ಜತೆ ಸೈನೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ  ಶಿರಾ ತಾಲೂಕಿನ  ಭೂವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೇ ಗ್ರಾಮದ ಚೇತನ್  ಮತ್ತು ಮಾಗೋಡು ಗ್ರಾಮದ ನಿವೇದಿತಾ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಮೃತರಿಬ್ಬರು  ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದಕ್ಕೆ ಮನೆಯವರ ವಿರೋಧವಿತ್ತು ಎನ್ನಲಾಗಿದೆ.

ಈ ನಡುವೆ ಚೇತನ್ ಗೆ ಒಂದುವರೆ ತಿಂಗಳ ಹಿಂದಷ್ಟೇ ಬೇರೆ ಯುವತಿಯೊಂದಿಗೆ ವಿವಾಹವಾಗಿತ್ತು. ಇದರಿಂದ ಬೇಸತ್ತ ಚೇತನ್ ಹಾಗೂ ಈತನ ಪ್ರೇಯಸಿ ನಿವೇದಿತಾ ಕಳೆದ ರಾತ್ರಿ ಸೈನೈಡ್ ಸೇವಿಸಿ  ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು  ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: