ಮೈಸೂರು

ಶಿಕ್ಷಕರೆಂದರೆ ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ತೆರೆಯುವ ದೇವತೆಗಳು : ಡಾ. ಮಹದೇವ್

ಮೈಸೂರು,ಫೆ.23:- ಜಯಲಕ್ಷ್ಮೀಪುರಂನ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ 5ನೇ ವಾರ್ಷಿಕ ರಾಜ್ಯ ಮಟ್ಟದ ಪತ್ರಿಕಾ ಮಂಡನೆ ಮತ್ತು ಪೋಸ್ಟರ್ ಪ್ರಸ್ತುತಿಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾನವಿಕ ವಿಭಾಗದ ಮುಖ್ಯಸ್ಥರಾದ ಡಾ. ಮಹದೇವ್  ಶಿಕ್ಷಕರು ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ಹೊರತೆಗೆಯುವ ದೇವತೆಗಳು. ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಪೋಷಕರ ಸಹಕಾರ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ವಿದ್ಯಾಸಂಸ್ಥೆಗಳು ಆಲೋಚನೆಗಳ ವಿನಿಮಯಕ್ಕಾಗಿ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸಬೇಕು. ವಿದ್ಯಾರ್ಥಿಗಳ ಬೌದ್ಧಿಕತೆಯನ್ನು ಸ್ವಚ್ಛಂದಗೊಳಿಸಲು ಬೆಳಕಾಗಬೇಕೆಂದು ಸಲಹೆ ನೀಡಿದರು. ಅಂತೆಯೇ ಮಾನವನ ಸ್ವಭಾವ ಮತ್ತು ಮಾನವೀಯತೆಯ ಕುರಿತು ಮಾತನಾಡಿದರು.

ಪ್ರಾಂಶುಪಾಲರಾದ ಡಾ. ವಿ. ನಿವೇದಿತಾ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಭಾಷೆಯ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮೂವತ್ತಕ್ಕೂ ಹೆಚ್ಚಿನ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸೃಜನಶೀಲತೆಯನ್ನು ಹೊರಹಾಕಿದರು. ಪತ್ರಿಕಾ ಮಂಡನೆಯ ಸ್ಪರ್ಧೆಯಲ್ಲ್ಲಿ ಕಾವೇರಿ ಪ್ರಥಮ ದರ್ಜೆ ಕಾಲೇಜಿನ ಅಶ್ವಿನಿರವರು ಪ್ರಥಮ ಸ್ಥಾನವನ್ನು, ಟೆರಿಷಿಯನ್ ಕಾಲೇಜಿನ ಕಥಕ್ಕಳಿಯ ಎರಡನೇ ಸ್ಥಾನವನ್ನು, ಎಂ. ಎಂ. ಕೆ. ಎಸ್. ಡಿ. ಎಂ, ಕಾಲೇಜಿನ ಶ್ವೇತಾ ಕೃಷ್ಣ ತೃತೀಯ ಸ್ಥಾನವನ್ನು ಮತ್ತು ಹಿಂದೂಸ್ಥಾನ ಪ್ರಥಮ ದರ್ಜೆ ಕಾಲೇಜಿನ ಮಹಮದ್ ನಾಲ್ಕನೇ ಸ್ಥಾನವನ್ನು ಗಳಿಸಿರುತ್ತಾರೆ.

ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನ ಮನೀಶಾ ಎಂ. ಚಾಂದ್‍  ಪ್ರಥಮ ಬಹುಮಾನವನ್ನು, ಮಹಾರಾಜ ಕಾಲೇಜಿನ ಕೀರ್ತನಾ ಮತ್ತು ತಂಡ ಹಾಗೂ  ಕಾವೇರಿ ಪ್ರಥಮ ದರ್ಜೆ ಕಾಲೇಜಿನ ಅಶ್ವಿನಿರವರು ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಈ ಸಂದರ್ಭದಲ್ಲಿ ಸಂತ ಜೋಸೆಫರ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಪ್ರೊ. ಮಣಿರವರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  (ಎಸ್.ಎಚ್)

Leave a Reply

comments

Related Articles

error: