ಮೈಸೂರು

ವಿದ್ಯೆ ಕಲಿಸಿ ಉತ್ತಮ ಮಾರ್ಗದರ್ಶನ ನೀಡಿದ ಗುರುವೃಂದಕ್ಕೆ ಶಿಷ್ಯರಿಂದ ಗುರುವಂದನೆ

ಮೈಸೂರು,ಫೆ.23:- ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಶಿಂಡೇನಹಳ್ಳಿ ಗ್ರಾಮದಲ್ಲಿ ಹಳ್ಳಿಗಾಡಿನಲ್ಲಿ ಓದಿ ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಮಾರ್ಗದರ್ಶನ ನೀಡಿದ ಗುರುಗಳಿಗೆ ಶಿಷ್ಯರು ಗುರುವಂದನಾ ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದರು.

ಶಾಲೆಯಲ್ಲಿ ಓದಿ ಕಷ್ಟಪಟ್ಟು ಉದ್ಯೋಗ ಪಡೆದ ಯುವಕರು ಗುರುಗಳಿಗೆ ಅಭಿನಂದನೆ ಸಲ್ಲಿಸಿದರು. ಶಾಲೆ ಆರಂಭದಿಂದ ಈವರೆಗೂ ಶಿಂಡೇನಹಳ್ಳಿ ಗ್ರಾಮದಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ 25 ಕ್ಕೂ ಹೆಚ್ಚು ನೌಕರರು, ಶಿಕ್ಷಣ, ಅರಣ್ಯ, ಪೊಲೀಸ್,  ಕೆಪಿಟಿಸಿಎಲ್, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರು ಉದ್ಯೋಗಿಗಳು ಗುರುಗಳನ್ನು ಸನ್ಮಾನಿಸಿದರು.

ನಿವೃತ್ತ ಶಿಕ್ಷಕರಾದ ಅನಂತರಾಮಯ್ಯ, ಸರಸ್ವತಿ ಬಾಯಿ, ವತ್ಸಲಾ ಮೇರಿ ,ಮೀರಾ ಬಾಯಿ, ಸರಸ್ವತಿ, ಜಲಜಾ, ಮಹೇಶ್ ಸೇರಿದಂತೆ 9 ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು.

ಶಿಂಡೇನಹಳ್ಳಿ ಗ್ರಾಮದಲ್ಲಿ ಓದಿ ಅರಣ್ಯ ಇಲಾಖೆಯಲ್ಲಿ ಎಸಿಎಫ್ ಆಗಿರುವ ಮಹದೇವು ಪಿ, ಉಪನ್ಯಾಸಕ ಶರತ್ ಕುಮಾರ್,  ಗ್ರಂಥಪಾಲಕ ಬಣ್ಣೇಗೌಡ, ಶಿಕ್ಷಕರಾದ ರವಿಕುಮಾರ್, ಪೊಲೀಸ್ ಪೇದೆಗಳಾದ ರವಿಕುಮಾರ್, ಮಂಜು, ರೈಲ್ವೆ ಉದ್ಯೋಗಿ ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: