ಮೈಸೂರು

ಜ.26 : ‘ಮುಂಬೈ’ ಸಿನಿಮಾ ತೆರೆಗೆ

ಡಾರ್ಲಿಂಗ್ ಕೃಷ್ಣ ನಟಿಸಿರುವ ‘ಮುಂಬೈ’ ಸಿನಿಮಾ ಇದೇ ಜನವರಿ 26 ರಂದು ತೆರೆಕಾಣಲಿದೆ ಎಂದು ನಟ ಕೃಷ್ಣ ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರಿನಲ್ಲಿ ಶಾಂತಲಾ ಮತ್ತ ಸಂಗಂ ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಕೋಟಿ ರಾಮು ಅವರು ನಿರ್ಮಿಸಿರುವ ಚಿತ್ರಕ್ಕೆ ಎಕೆ-47 ಚಿತ್ರದ ನಿರ್ದೇಶಕ ರಮೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರವು ಪ್ರೇಮ ಕಥೆ ಆಧಾರಿತವಾಗಿದ್ದು, ಸ್ವಲ್ಪ ರೌಡಿಸಂನಿಂದ ಕೂಡಿದೆ ಎಂದರು.

ನಾಯಕನ ಪಾತ್ರ ಅರ್ಥಪೂರ್ಣವಾಗಿದೆ. ಜೀವನದಲ್ಲಿ ಒಳ್ಳೆಯ ಗುರಿ ಹೊಂದಿರುವ ನಾಯಕ ಆ ಗುರಿ ಈಡೇರಿಕೆಗಾಗಿ ಮುಂಬೈಗೆ ಹೋಗುವ ಪರಿ ಇಲ್ಲಿದೆ. ಅನಾಥಾಶ್ರಮದ ಚಿತ್ರಣ  ಈ ಸಿನಿಮಾದಲ್ಲಿದೆ. ತೇಜು ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಬುಲೆಟ್ ಪ್ರಕಾ‍ಶ್, ರಂಗಾಯಣ ರಘು ಮತ್ತಿತರ ಹಾಸ್ಯ ಕಲಾವಿದರು ಇದ್ದಾರೆ. ಈ ಸಿನಿಮಾವು 2 ಗಂಟೆ 27 ನಿಮಿಷವಿದ್ದು, ಸುಮಾರು 6 ರಿಂದ 8 ಕೋಟಿ ಚಿತ್ರ ನಿರ್ಮಾಣಕ್ಕೆ ಖರ್ಚಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಟ ಕೃಷ್ಣನ ತಂದೆ ನಾಗಪ್ಪ ಮತ್ತು ಸುಮಿತ್ ಉಪಸ್ಥಿತರಿದ್ದರು.

Leave a Reply

comments

Related Articles

error: