ಪ್ರಮುಖ ಸುದ್ದಿ

ಯುಕೇರ್ ನಿಂದ ಕ್ರಾಂತಿಕಾರಕ ರೋಗತಡೆಯ ಡಿಜಿಟಲ್ ಅರೋಗ್ಯಸೇವೆಗೆ ಚಾಲನೆ

ದೇಶ (ನವದೆಹಲಿ)ಫೆ.23:- ಮುಂಚೂಣಿಯ ಆರೋಗ್ಯಸೇವಾ ಪೂರೈಕೆದಾರ ಯುಕೇರ್ ತನ್ನ ಡಿಜಿಟಲ್ ಪ್ರಿವೆಂಟಿವ್ ಹೆಲ್ತ್ ಕೇರ್, ಸೇಫ್ಟಿ ಮತ್ತು ವೆಲ್ ನೆಸ್ ಸೇವಾ ಪ್ಲಾಟ್  ಫಾರಂ ಪರಿಚಯಿಸಿದೆ. ಮುಂಬೈನಲ್ಲಿ ಮುಖ್ಯ ಕಛೇರಿ ಹೊಂದಿರುವ ಯುಕೇರ್ ಪ್ಲಾಟ್‍ಫಾರಂ ಫಿಟ್‍ಬಿಟ್, ಇಸಿಜಿ ಮೆಷಿನ್, ಆ್ಯಪ್‍ನೊಂದಿಗೆ 24×7 ಆಂಬುಲೆನ್ಸ್, ರಿಯಾಯಿತಿಯ ಡಯಾಗ್ನೊಸ್ಟಿಕ್ಸ್, ವೈಯಕ್ತಿಕ ಸುರಕ್ಷತೆ ಮತ್ತು ನೆರವು, ಹಿರಿಯ ನಾಗರಿಕರಿಗೆ ಬುಕ್ ಎ ರೈಡ್, ವಿಮೆಯ ರಕ್ಷಣೆ ಮತ್ತು ಹೆಲ್ತ್‍ವಾಲ್ಟ್ ಅನ್ನು ಮುಂಬೈ, ದೆಹಲಿ-ಎನ್‍ಸಿಆರ್, ಹೈದರಾಬಾದ್, ಬೆಂಗಳೂರು, ಚೆನ್ನೈ, ಕೊಲ್ಕತಾ. ಅಹಮದಾಬಾದ್ ಮತ್ತು ಪುಣೆಗಳಲ್ಲಿ ಚಾಲನೆ ನೀಡಿದೆ.  ಈ ಸೆಂಟ್ರಲೈಸ್ಡ್ ಪ್ಲಾಟ್‍ಫಾರಂ ಜನರಿಗೆ ತಮ್ಮ ಕುರಿತು ಹಾಗೂ ತಮ್ಮ ಪ್ರೀತಿಪಾತ್ರರ ಆರೋಗ್ಯ ಮತ್ತು ಸುರಕ್ಷತೆಯನ್ನು ಒಂದು ಗುಂಡಿಯ ಸ್ಪರ್ಶದಲ್ಲಿ ನೀಡುತ್ತದೆ. ಕಂಪನಿ ಏಪ್ರಿಲ್ 2019ರ ವೇಳೆಗೆ ತನ್ನ ವ್ಯಾಪ್ತಿಯನ್ನು ಎಲ್ಲ ರಾಜ್ಯಗಳ ರಾಜಧಾನಿಗಳಿಗೆ ವಿಸ್ತರಿಸುವ ಗುರಿ ಹೊಂದಿದೆ. ಒಂದು ವರ್ಷದ ಪ್ಯಾಕೇಜ್‍ಗೆ ಮಾಸಿಕ 1099ರೂ.ಗೆ ಚಂದಾದಾರಿಕೆ ಮತ್ತು ಎರಡು ವರ್ಷದ ಪ್ಯಾಕೇಜ್‍ಗೆ ಮಾಸಿಕ 899ರೂ. ಹೊಂದಿದೆ. ಯುಕೇರ್‍ನಲ್ಲಿ ದಾಖಲಿಸಿದ 7 ದಿನಗಳಲ್ಲಿ ಗ್ರಾಹಕರು ಉಚಿತ ಫಿಟ್‍ಬಿಟ್ ಮತ್ತು ಇಸಿಜಿ ಮೆಷಿನ್ ಅನ್ನು ವೆಲ್ಕಂ ಕಿಟ್ ಭಾಗವಾಗಿ ಪಡೆಯುತ್ತಾರೆ. ಈ ಕಿಟ್‍ನಲ್ಲಿ ವಿಮೆಯ ರಕ್ಷಣೆ, ಬಹಳಷ್ಟು ಪೆಥಾಲಜಿ ಲ್ಯಾಬ್‍ನಲ್ಲಿ ರೋಗಪರೀಕ್ಷೆಯಲ್ಲಿ ರಿಯಾಯಿತಿಗಳೊಂದಿಗೆ ಆರೋಗ್ಯ ಪರೀಕ್ಷೆಗಳ ಸೌಲಭ್ಯವಿರುತ್ತದೆ.

ಯುಕೇರ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಗುಗ್ನಾನಿ, `ಪುಟ್ಟ ಕುಟುಂಬಗಳು ಹಾಗೂ ಒತ್ತಡದ ಜೀವನಶೈಲಿಯಿಂದ ಆರೈಕೆ ಮತ್ತು ನೆರವಿಗೆ ಸಮಗ್ರ ರೋಗನಿಯಂತ್ರಣ ಆರೋಗ್ಯಸೇವೆಯ ಪರಿಹಾರಗಳ ಅಗತ್ಯವಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ವರದಿಯ ಪ್ರಕಾರ ಶೇ.25ರಷ್ಟು ಭಾರತೀಯರು 70ರ ವಯಸ್ಸು ತಲುಪುವ ಮುನ್ನವೇ ಜೀವನಶೈಲಿ ರೋಗಗಳಾದ ಹೃದಯ ರೋಗಗಳಿಗೆ ಬಲಿಯಾಗುತ್ತಾರೆ. ಆದ್ದರಿಂದ ರೋಗತಡೆಯ ಆರೋಗ್ಯಸೇವೆಯ ಪ್ಲಾಟ್‍ಫಾರಂಗಳು ಈ ಸಮಸ್ಯೆಯನ್ನು ನಿವಾರಿಸಲು ಅತ್ಯಗತ್ಯವಾಗಿವೆ” ಎಂದರು. “ಹಿರಿಯ ನಾಗರಿಕರು ಹಾಗೂ ವೃತ್ತಿನಿರತರನ್ನು ತಮ್ಮ ಹಾಗೂ ತಮ್ಮ ಕುಟುಂಬವರ್ಗದ ಕಾಳಜಿ ಮಾಡಲು ರೋಗತಡೆಯ ಆರೋಗ್ಯಸೇವೆಯನ್ನು ಪೂರೈಸಲು ನಾವು ಯುಕೇರ್ ಪ್ರಾರಂಭಿಸಿದ್ದೇವೆ. ಯುಕೇರ್‍ನೊಂದಿಗೆ ನಾವು ಭಾರತದಲ್ಲಿ ಜನರು ಆರೋಗ್ಯಸೇವೆ ಮತ್ತು ಸೌಖ್ಯವನ್ನು ಕಾಣುವ ವಿಧಾನವನ್ನು ಬದಲಾಯಿಸಲಿದ್ದೇವೆ. ಈ ಪ್ಲಾಟ್‍ಫಾರಂನಲ್ಲಿರುವ ಸೇವೆಗಳು ಆಧುನಿಕ ಜೀವನಶೈಲಿಯ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗಿದೆ” ಎಂದರು.

ಕಾರ್ಪೊರೇಟ್ ವೆಲ್‍ನೆಸ್‍ನ ಅಗತ್ಯಗಳನ್ನು ಪೂರೈಸಲು ಯುಕೇರ್ ಆರೋಗ್ಯದ ರಿಸ್ಕ್‍ಗಳನ್ನುಕನಿಷ್ಠಗೊಳಿಸುವ ಮತ್ತು ಉದ್ಯೋಗಿಗಳ ಉತ್ಪಾದಕತೆ ಹೆಚ್ಚಿಸುವ ಸೇವೆಗಳು ಮತ್ತು ಉತ್ಪನ್ನಗಳನ್ನು ಒದಗಿಸುತ್ತಿದ್ದೇವೆ. ಇದು ಇಎಂಆರ್, ಹೆಲ್ತ್ ಚೆಕರ್ಸ್, ಎಮರ್ಜೆನ್ಸಿ ಸೇವೆಗಳು, ರಿಯಾಯಿತಿಯ ರೋಗಪರೀಕ್ಷೆ ಮತ್ತು ವೈದ್ಯರ ಸಲಹೆ ಹಾಗೂ 24×7 ಆರೋಗ್ಯ ಮೇಲ್ವಿಚಾರಣೆ ಮುಂತಾದವುಗಳನ್ನು ಒದಗಿಸುತ್ತದೆ. ಉತ್ಪನ್ನದ ವಿವರಗಳಿಗೆ   https://ucare.co.in/home.html ಭೇಟಿ ಕೊಡಬಹುದು.

ಹೆಚ್ಚಿನ ಮಾಹಿತಿಗೆ ಶರ್ಮಿಷ್ಠಾ ಪಾಲ್ [email protected] +91 9899167837 , ಶಿವಾನಿ ರಾವತ್ [email protected] +91 7838152095 ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: