ಮೈಸೂರು

ಜಿ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ : ಮಾನಸಿಕ ಮೈತ್ರಿ ಅಲ್ಲ; ಅನೈತಿಕ ಮೈತ್ರಿ : ಬಿಜೆಪಿ ಆಕ್ರೋಶ

ಮೈಸೂರು,ಫೆ.23:-  ಜಿ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಿಂದ ಹೊರಬಂದಿದ್ದ ಬಿಜೆಪಿ ಜೆಡಿಎಸ್‌ಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದೆ.

ನಂಬಿಸಿ ಕತ್ತು ಕೊಯ್ದ ಜೆಡಿಎಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದು,ಕೊಟ್ಟ ಮಾತು ತಪ್ಪಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಮೈಸೂರು ಜಿ‌.ಪಂ.ನಲ್ಲಿ ರಾಜಕೀಯ ಹೈಡ್ರಾಮಾ ನಡೆದಿತ್ತು. ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸಿದ ಜೆಡಿಎಸ್ ಜಿಲ್ಲಾ ಪಂಚಾಯತ್  ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸಿದರು. ಜೆಡಿಎಸ್ ವಿರುದ್ಧ ಧಿಕ್ಕಾರ ಕೂಗಿ ವಚನ ಭ್ರಷ್ಟ ಪಕ್ಷ ಎಂದು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರು ಯಾವಾಗಲೂ ಬೆನ್ನಿಗೆ ಚೂರಿ ಹಾಕ್ತಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲ್ಲ ಅಂತ ಹೇಳಿದ್ದರು. ಕೊನೆ ಕ್ಷಣದಲ್ಲಿ ಜೆಡಿಎಸ್ ಬಿಜೆಪಿ ಕೈ ಬಿಟ್ಟಿದೆ. ಸಮಯ ಸಾಧಕರು ಜೆಡಿಎಸ್ ಪಕ್ಷದವರು.ಮೋಸದ ರಾಜಕೀಯ ಜೆಡಿಎಸ್ ನವರದ್ದು. ಈ ಮೋಸಕ್ಕೆ ರಾಜ್ಯದ ಜನರೇ ತಕ್ಕ ಪಾಠ ಕಲಿಸುತ್ತಾರೆ. ಚುನಾವಣೆ ಬಹಿಷ್ಕಾರ ಮಾಡಿ ನಾಮಪತ್ರ ಹಿಂಪಡೆದಿದ್ದೇವೆ ಎಂದು ಜಿ.ಪಂ. ಮಾಜಿ ಉಪಾಧ್ಯಕ್ಷ ನಟರಾಜು ಆಕ್ರೋಶ ವ್ಯಕ್ತಪಡಿಸಿದರು.

ಇದು ಅನೈತಿಕ ಮೈತ್ರಿ. ಇದು ಮಾನಸಿಕ ಮೈತ್ರಿ ಅಲ್ಲ. ಕಾಂಗ್ರೆಸ್ ಜೆಡಿಎಸ್ ನವರು ಎಣ್ಣೆ ಸೀಗೆಕಾಯಿಯಂತೆ ಇದ್ದರು. ಅಧಿಕಾರದ ಆಸೆಗೆ ಎಣ್ಣೆ ಸೀಗೆ ಕಾಯಿ ಒಂದಾಗಿವೆ ಎಂದು ಹುಲ್ಲಹಳ್ಳಿ ಮಂಜುಳ ಹೇಳಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: