ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು, ಫೆ.25:-  ಎನ್.ಆರ್.ಮೊಹಲ್ಲಾ ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 66/11 ಕೆವಿ ದೇವನೂರು, ರಾಜೀವ್‍ನಗರ ಮತ್ತು ಆಯರಹಳಿ ವಿತರಣಾ ಕೇಂದ್ರದಲ್ಲಿ 4ನೇ ತ್ರೈಮಾಸಿಕಾ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 25 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ದೇವನೂರು ವಿ.ವಿ. ಕೇಂದ್ರದ ವ್ಯಾಪ್ತಿಯ ರಾಜೀವ್‍ನಗರ 1ನೇ, 2ನೇ ಮತ್ತು 3ನೇ ಹಂತ, ಶಾಂತಿನಗರ, ನೆಹರೂನಗರ, ರಾಧಾಕೃಷ್ಣ ನಗರ, ಭಾರತ್‍ನಗರ, ಜೆ.ಎಸ್.ಎಸ್. ಬಡಾವಣೆ, ಶಕ್ತಿನಗರ, ಗೌಸಿಯಾನಗರ, ಕ್ಯಾತಮಾರನಹಳ್ಳಿ, ಕಲ್ಯಾಣಗಿರಿ, ಹಂಚ್ಯಾ, ಭುಗತಗಳ್ಳಿ, ಮೇಳಾಪುರ, ರಮ್ಮನಹಳ್ಳಿ ವಾಟರ್ ವಕ್ರ್ಸ್, ಕಾಳಸಿದ್ದನಹುಂಡಿ, ಸಾತಗಳ್ಳಿ, ರಮ್ಮನಹಳ್ಳಿ ಮತ್ತು ಬನ್ನೂರು ರಿಂಗ್ ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು, ರಾಜೀವ್‍ನಗರ ವಿ.ವಿ. ಕೇಂದ್ರದ ವ್ಯಾಪ್ತಿಯನಾರಾಯಣ ಹೃದಯಾಲಯ, ರಾಜೀವ್‍ನಗರ 2ನೇ ಹಂತ, ಅಲ್ಬದರ್ ಮಸೀದಿ, ಸೂರ್ಯನಾರಾಯಣ ದೇವಸ್ಥಾನ, ಕ್ರಿಷ್ಚಿಯನ್ ಕಾಲೋನಿ,ಆಯರಹಳ್ಳಿ ವಿ.ವಿ. ಕೇಂದ್ರದ ವ್ಯಾಪ್ತಿಯ ಆಯರಹಳ್ಳಿ, ರಾಯನಹುಂಡಿ, ಕುಂಬ್ರಹಳ್ಳಿ ಮಠ, ಸೋಮೇಶ್ವರಪುರ, ಬಸಹಳ್ಳಿಹುಂಡಿ, ದೇವಲಾಪುರ, ಚಿಕ್ಕೇಗೌಡನಹುಂಡಿ, ಕುಂಬ್ರಹಳ್ಳಿ, ಮರಿಗೌಡನಹುಂಡಿ, ಕಿರಾಳು ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು  ಎನ್.ಆರ್.ಮೊಹಲ್ಲಾ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: