ಕರ್ನಾಟಕ

ಕಾಡ್ಗಿಚ್ಚಿನಿಂದ ಬಂಡೀಪುರ ರಕ್ಷಿಸಿ: ದರ್ಶನ್ ಮನವಿ

ಬೆಂಗಳೂರು,ಫೆ.24-ಬಂಡೀಪುರ ಕಾಡ್ಗಿಚ್ಚು ಘಟನೆಯಿಂದ ಪ್ರಾಣಿ ಪ್ರಿಯ ನಟ ದರ್ಶನ್ ನೊಂದುಕೊಂಡಿದ್ದಾರೆ. ದರ್ಶನ್ ಅವರು ಸರ್ಕಾರ ಹಾಗೂ ಸ್ವಯಂ ಸಂಘಗಳ ಜೊತೆಗೆ ಕೈ ಜೋಡಿಸುವ ಮನಸ್ಸು ಮಾಡಿದ್ದಾರೆ.

ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಪೇಜ್ನಲ್ಲಿ ಪೋಸ್ಟ್ ಮಾಡಿ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

 

ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನಜೀವಿ ಸಂಕುಲಕ್ಕೆ ತೊಂದರೆಯುಂಟಾಗಿದೆ. ಸರ್ಕಾರ, ಅರಣ್ಯ ಇಲಾಖೆ ಹಾಗೂ ಹಲವಾರು ಸ್ವಯಂಸೇವಕರು ಜೊತೆಗೂಡಿ ಅವಘಡವನ್ನು ಶಮನ ಮಾಡಲು ಯತ್ನಿಸುತ್ತಿದ್ದಾರೆ. ಆಸಕ್ತಿಯುಳ್ಳ ಸ್ವಯಂಸೇವಕರು ದಯಮಾಡಿ ಅಭಿಯಾನದಲ್ಲಿ ನೆರವಾಗಬೇಕಾಗಿ ದರ್ಶನ್ ವಿನಂತಿಸಿದ್ದಾರೆ.

ಕುರಿತಂತೆ ಎರಡು ಪೋಸ್ಟ್ ಮಾಡಿದ್ದಾರೆ. ಬೆಂಕಿಯಲ್ಲಿ ಬೆಂದಿರುವ ಪ್ರಾಣಿಗಳ ಚಿತ್ರ, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿರುವ ಗಿಡ ಮರಗಳ ಚಿತ್ರ ಹಾಕಿದ್ದಾರೆ. (ಎಂ.ಎನ್)

Leave a Reply

comments

Related Articles

error: