ಮೈಸೂರು

ಅಮೃತ್ ಯೋಜನೆ ಅಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ-ಶಾಸಕ ನಾಗೇಂದ್ರ

ಮೈಸೂರು,ಫೆ.25:- ವಿವಿ.ಮೊಹಲ್ಲಾ, ವಿಜಯ ನಗರ, ಯಾದವಗಿರಿಯಲ್ಲಿ ಅಮೃತ್ ಯೋಜನೆ ಅಡಿಯಲ್ಲಿ ನಿರ್ಮಾಣ ಹಂತದಲ್ಲಿರುವ  ಕಾಮಗಾರಿಯನ್ನು  ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ನಾಗೇಂದ್ರ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೆಲಮಟ್ಟದ ಜನಸಂಗ್ರಹಗಾರ  ಪರಿಶೀಲನೆ ನಡೆಸಿದ ಅವರು ಯಾದವಗಿರಿ ಮತ್ತು ವಿಜಯನಗರ  ಹೈ ಲೆವೆಲ್ ರಿಸರ್ವಾಯರ್ ಸಮೀಪದ ಎರಡು ಕಾಮಗಾರಿಗಳ  ಪರಿಶೀಲನೆ ನಡೆಸಿದರು.

13 ದಶಲಕ್ಷ ಲೀಟರ್ ನೀರಿನ ಸಾಮರ್ಥ್ಯವನ್ನು ಒಳಗೊಂಡ ಸುಮಾರು 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯನ್ನು ಶೀಘ್ರದಲ್ಲೇ   ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: