ಕರ್ನಾಟಕಪ್ರಮುಖ ಸುದ್ದಿ

ಏರೋ ಇಂಡಿಯಾ: 2021ಕ್ಕೆ ಬೆಂಗಳೂರಿಂದ ಶಿಫ್ಟ್ ಆಗಲಿದೆಯಾ?

ಬೆಂಗಳೂರು (ಫೆ.25): ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಏರೋ ಇಂಡಿಯಾ ಶೋ ಸಿಹಿ-ಕಹಿ ನೆನಪುಗಳೊಂದಿದೆ ಅಂತ್ಯ ಕಂಡಿದೆ. ಫೆ.20ರಿಂದ 24ರ ವರೆಗೆ ಏರೋ ಇಂಡಿಯಾ ಶೋ ನಡೆದಿದ್ದು, ಎರಡು ದುರ್ಘಟನೆಗಳಿಗೂ ಕೂಡ ಸಾಕ್ಷಿಯಾಯಿತು. ಇದೀಗ 2021ರ ಏರೋ ಇಂಡಿಯಾ ಎಲ್ಲಿ ನಡೆಯಲಿದೆ ಎನ್ನುವ ಅನುಮಾನ ಎಲ್ಲರಲ್ಲಿ ಮೂಡುವುದು ಸಹಜ.

ಆದರೆ ಎರಡು ವರ್ಷಗಳ ನಂತರ ನಡೆಯಲಿರುವ ಏರ್ ಶೋ ನ ನಿಗದಿ ಕುರಿತು ರಹಸ್ಯ ಕಾಯ್ದುಕೊಳ್ಳಲಾಗಿದೆ. ಈ ಬಾರಿಯ ಪ್ರದರ್ಶನವು ಗೋವಾ ಅಥವಾ ಲಖ್ನೌಗೆ ಸ್ಥಳಾಂತರ ಆಗಲಿದೆ ಎಂಬ ಸುದ್ದಿ ಇತ್ತಾದರೂ ಕರ್ನಾಟಕದ ಭಾರಿ ವಿರೋಧಕ್ಕೆ ಮಣಿದು ಇಲ್ಲಿಯೇ ಆಯೋಜನೆ ಮಾಡಲಾಗಿತ್ತು. ಆದರೆ ಈ ಬಾರಿ ಹಿಂದಿನ ಸಂಪ್ರದಾಯ ಮುರಿಯಲಾಗಿದೆ. ಹೀಗಾಗಿ 2021ರ ವೈಮಾನಿಕ ಪ್ರದರ್ಶನ ಎಲ್ಲಿ ನಡೆಯಲಿದೆ ಎನ್ನುವ ಕುತೂಹಲ ಮೂಡಿದೆ.

ಮತ್ತೊಂದು ಮೂಲದ ಪ್ರಕಾರ ಮುಂದಿನ ಬಾರಿ ಚೆನ್ನೈ, ಹೈದರಾಬಾದ್ ಅಥವಾ ಪುಣೆ ನಗರಕ್ಕೆ ಏರೋ ಇಂಡಿಯಾ ಶಿಫ್ಟ್ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆಯ ಸನಿಹವಿರುವ ಕಾರಣ ರಾಜಕೀಯ, ಲಾಭ, ನಷ್ಟ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ 2021ರ ಶೋ ಎಲ್ಲಿ ನಡೆಯಲಿದೆ ಎನ್ನುವ ರಹಸ್ಯವನ್ನು ಬಿಟ್ಟುಕೊಡಲು ಯಾರೂ ತಯಾರಿಲ್ಲ. ಇದಕ್ಕೆ ಪೂರಕವೆನ್ನುವಂತೆ ಮುಂದಿನ ಶೋ ಎಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಸಂಘಟಕರಾಗಲಿ ಅಥವಾ ರಕ್ಷಣಾ ಸಚಿವರಾಗಲೀ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. (ಎನ್.ಬಿ)

Leave a Reply

comments

Related Articles

error: