ಕರ್ನಾಟಕಪ್ರಮುಖ ಸುದ್ದಿ

ಸಬ್‍ಸ್ಕ್ರೈಬ್ ಸಮರದಲ್ಲಿ ಪ್ಯೂಡಿಪೈ-ಟಿ ಸಿರೀಸ್ ಪೈಪೋಟಿ!

ಬೆಂಗಳೂರು (ಫೆ.25): ಸಬ್‍ಸ್ಕ್ರೈಬ್ ಸಮರದದಲ್ಲಿ ವಿಶ್ವದ ಜನಪ್ರಿಯ ವಿಡಿಯೋ ಸ್ಟ್ರೀಮರ್ ಯೂ-ಟ್ಯೂಬ್‍ನಲ್ಲಿ ಅತಿಹೆಚ್ಚು ಸಬ್‍ಸ್ಕ್ರೈಬರ್‍ಗಳನ್ನು ಹೊಂದಿದ್ದ ಸ್ವೀಡನ್ ಮೂಲದ ಯೂ-ಟ್ಯೂಬರ್ ಪ್ಯೂಡಿಪೈ ಅನ್ನು ಭಾರತೀಯ ಮ್ಯೂಸಿಕ್ ಕಂಪೆನಿ ಟಿ-ಸಿರೀಸ್ ಇದೀಗ ಹಿಂದಿಕ್ಕಿದೆ.

ಮೊನ್ನೆ ಶುಕ್ರವಾರದಂದು ಟಿ-ಸಿರೀಸ್ ಈ ಸಬ್ ಸ್ಕ್ರೈಬರ್ ಸಮರದಲ್ಲಿ ಪ್ಯೂಡಿಪೈ ಚಾನೆಲನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಯೂಟ್ಯೂಬ್ ಸಬ್ ಸ್ಕ್ರೈಬರ್ ಚಾನೆಲ್ ಎಂದು ಗುರುತಿಸಿಕೊಂಡಿತು. ಆದರೆ ವಿಷಾದವೆಂದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಕೇವಲ 8 ನಿಮಿಷಗಳ ಕಾಲ ಮಾತ್ರ ಟಿ ಸಿರಿಸ್ ಗ್ ಈ ನಂಬರ್ 1 ಪಟ್ಟ ಲಭ್ಯವಾಯ್ತು. ಈ ಸಮಯದಲ್ಲಿ ಟಿ-ಸಿರೀಸ್ ಪ್ಯೂಡಿಪೈ ನ ಚಾನೆಲ್ ಗಿಂತ 2000 ಅಧಿಕ ಸಬ್ ಸ್ಕ್ರೈಬರ್ ಗಳನ್ನು ಹೊಂದಿತ್ತು.

ತನ್ನ ಸಬ್ ಸ್ಕ್ರೈಬರ್ಸ್, ವಿಡಿಯೋ ನೋಡಿದವರ ಸಂಖ್ಯೆಗಳ ಸಾಚಾತನವನ್ನು ಪರೀಕ್ಷಿಸಲು ಯೂ-ಟ್ಯೂಬ್ ಪ್ರತೀ ವರ್ಷ ನಡೆಸುವ ಆಡಿಟ್ ಪ್ರಕ್ರಿಯೆಯಿಂದಾಗಿ ಈ ಬದಲಾವಣೆ ಸಂಭವಿಸಿತು ಎಂದು ಅಂತರ್ಜಾಲ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಪ್ಯೂಡಿಪೈ ಒಮ್ಮಿಂದೊಮ್ಮೆಲೇ ತನ್ನ 20,000 ಸಬ್ ಸ್ಕ್ರೈಬರ್ ಗಳನ್ನು ಕಳೆದುಕೊಳ್ಳುವಂತಾಯ್ತು ಮತ್ತು ಟಿ-ಸಿರೀಸ್ ಕೆಲ ನಿಮಿಷಗಳ ಮಟ್ಟಿಗಾದರೂ ನಂಬರ್ 1 ಪಟ್ಟಕ್ಕೆ ಏರುವಂತಾಯಯ್ತು.

ಭೂಷಣ್ ಕುಮಾರ್ ಮಾಲಿಕತ್ವದ ಟಿ-ಸಿರೀಸ್ 1980ರಿಂದಲೂ ಭಾರತದಲ್ಲಿ ಚಿರಪರಿಚಿತವಾಗಿದೆ. ಇನ್ನು ಸ್ವೀಡನ್ ಮೂಲದ ಫೆಲಿಕ್ಸ್ ಅರ್ವಿಡ್ ಉಲ್ಫ್ ಝೆಲ್ಬರ್ಗ್ ಯೂ-ಟ್ಯೂಬ್ ನಲ್ಲಿ ತನ್ನ ಹಾಸ್ಯದ ವಿಡಿಯೋಗಳಿಂದ ಹೆಸರುವಾಸಿಯಾಗಿದ್ದು ಅಂತರ್ಜಾಲ ವಲಯದಲ್ಲಿ ‘ಪ್ಯೂಡಿಪೈ’ ಎಂದೇ ಕರೆಸಿಕೊಳ್ಳುತ್ತಿದ್ದಾನೆ.

ಅಂದಹಾಗೆ ಪ್ರಸ್ತುತ ಟಿ-ಸಿರೀಸ್ 8.50 ಕೋಟಿಗೂ ಅಧಿಕ ಜನ ಸಬ್ ಸ್ಕ್ರೈಬರ್ಸ್ ಗಳನ್ನು ಹೊಂದಿದ್ದು ಪ್ಯೂಡಿಪೈ ಅವರ ಚಾನೆಲ್ ನ ಸಬ್ ಸ್ಕ್ರೈಬರ್ ಗಳ ಸಂಖ್ಯೆ 8.70 ಕೋಟಿಗೂ ಅಧಿಕವಾಗಿದೆ. ಯೂ-ಟ್ಯೂಬ್‍ನಲ್ಲಿ ನಂಬರ್ 1 ಪಟ್ಟಕ್ಕಾಗಿ ಈ ಎರಡು ಚಾನೆಲ್ ಗಳ ನಡುವೆ ಕಳೆದ 6 ವರ್ಷಗಳಿಂದ ನಿಕಟ ಸ್ಪರ್ಧೆ ನಡೆಯುತ್ತಿದೆ. (ಎನ್.ಬಿ)

Leave a Reply

comments

Related Articles

error: