ಪ್ರಮುಖ ಸುದ್ದಿಮೈಸೂರು

ಮಾ.17ರಂದು ರಾಜ್ಯಮಟ್ಟದ ತಾಂತ್ರಿಕ ರಸ ಪ್ರಶ‍್ನೆ ಸ್ಪರ್ಧೆ ‘ವೇಧಾ ಕ್ವಿಜ್ ಫೆಸ್ಟ್ 2019’

ಮೈಸೂರು,ಫೆ.25 : ಮೇಧಾ ಸಾಫ್ಟೆಕ್ ಇಂಡಿಯಾ ಪ್ರೈ ಲಿ ವತಿಯಿಂದ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯಾಭಿವೃದ್ಧಿಗಾಗಿ ರಾಜ್ಯಮಟ್ಟದ ‘ವೇಧಾ ಕ್ವಿಜ್ ಫೆಸ್ಟ್ 2019’ ಅನ್ನು ಆಯೋಜಿಸಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ನೊಂದಾಯಿಸಿಕೊಳ್ಳಬೇಕೆಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಯು.ಆರ್.ರುಕ್ಮಣಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಾ.17ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬೆಳಗ್ಗೆ 7 ಗಂಟೆಯಿಂದ
ಆರಂಭವಾಗುವ ರಸಪ್ರಶ್ನೆ ಸ್ಪರ್ಧೆಯು ಪ್ರಾಥಮಿಕ, ಸೆಮಿಪೈನಲ್, ಫೈನಲ್ ಸೇರಿದಂತೆ ಮೂರು ಹಂತಗಳಲ್ಲಿ ನಡೆಯಲಿದ್ದು ಆಯ್ಕೆಯಾದ ಕೊನೆಯ ನೂರು ಜನರನ್ನು ಅಂತಿಮ ಸುತ್ತಿನ ರಸಪ್ರಶ್ನೆ ವಿಭಾಗಕ್ಕೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಸಂಜೆ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಇರಲಿದ್ದಾರೆ.

15 ರಿಂದ 40 ವರ್ಷ ವಯೋಮಾನದವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಮಾರ್ಚ್ 10ರಂದು ನೊಂದಾಣಿಯ ಕೊನೆ ದಿನವಾಗಿದೆ. ಆನ್ ಲೈನ್ www.vedhasoftech.com ನಲ್ಲಿ ನೋಂದಾಣಿ ಮಾಡಿಕೊಂಡವರಿಗೆ ಶೇ.80ರಷ್ಟು ತಾಂತ್ರಿಕ ವಿಷಯಗಳನ್ನು ನಮ್ಮ ವೆಬ್ ಸೈಟ್ ಪಡೆದುಕೊಳ್ಳಲು ಅವಕಾಶವಿದೆ. ಅಲ್ಲದೇ ಸ್ಥಳದಲ್ಲಿಯೂ ನೋಂದಾಣಿಗೆ ಅವಕಾಶವಿದ್ದು ರೂ.500 ಪ್ರವೇಶ ಶುಲ್ಕವಿದೆ ಎಂದು ಹೇಳಿದರು.

ವಿಜೇತರಿಗೆ ಡಟ್ಸನ್ ರೆಡಿ ಗೋ ಕಾರ್ (ಪ್ರಥಮ) ಅಪಲ್ ಮ್ಯಾಕ್ ಬುಕ್ (ದ್ವಿತೀಯ) ಹೋಂಡಾ ಡಿಯೋ ಸ್ಕೂಟರ್ (ತೃತೀಯ) ಹಾಗೂ ಟ್ಯಾಬ್ ಹಾಗೂ ಮೊಬೈಲ್ ಪೋನ್ ಗಳನ್ನು ಸಮಾಧಾನಕರವಾಗಿ ನೀಡಲಾಗುವುದು. ಸಂಸ್ಥೆ ವತಿಯಿಂದ ಉದ್ಯೋಗ ದರ್ಶಿ, ಮೈಸೂರು ಪಂಡಿತ್, ಯಾತ್ರಿ ಹಿಂದೂಸ್ಥಾನ ಆಫ್ ಗಳನ್ನು ಪ್ಲೇ ಸ್ಟೋರ್ ಗೆ ಬಿಡುಗಡೆಗೊಳಿಸಲಾಗುವುದು, ಅಲ್ಲದೇ ಈಗಾಗಲೇ ಮೈಸೂರು ವಲಯ ಮಟ್ಟದ ಕಾರ್ಯಾಗಾರವನ್ನು ಯಶಸ್ವಿಯಾಗಿದೆ ಎಂದು ಸಂಸ್ಥೆ ಕಾರ್ಯವೈಖರಿ ಬಗ್ಗೆ ವಿವರ ನೀಡಿದರು.

ಸಂಸ್ಥೆ ನಿರ್ದೇಶಕ ತಾರಾದಾಸ್, ಶಾಲಿನಿ, ಕೃತಿಕಾ, ಭಾರ್ಗವಿ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: