ಪ್ರಮುಖ ಸುದ್ದಿಮನರಂಜನೆ

ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಯಾವ ಚಿತ್ರಕ್ಕೆ ಅಗ್ರಸ್ಥಾನ?

ಲಾಸ್‌ಎಂಜಲೀಸ್ (ಫೆ.25): ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್‌ನ ಡೊಲ್ಬಿ ಥಿಯೇಟರ್‌ನಲ್ಲಿ ಆರಂಭವಾಗಿದ್ದು, ಹಲವು ಅಚ್ಚರಿಗಳಿಗೆ ಈ ಬಾರಿಯ ಪ್ರಶಸ್ತಿಗಳು ಕಾರಣವಾಗಿವೆ. ವರ್ಷದ ಚಿತ್ರ ಪ್ರಶಸ್ತಿಗೆ ಯಾವುದು ಫೇವರಿಟ್ ಎಂಬ ಬಗ್ಗೆ ಇನ್ನೂ ಸ್ಪಷ್ಟ ಸುಳಿವು ಸಿಗುತ್ತಿಲ್ಲ. ನೆಟ್‌ಫ್ಲಿಕ್ಸ್ ಅವರ ರೋಮಾ ಚಿತ್ರ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ.

ರಾಣಿಯ ವ್ಯಕ್ತಿಚಿತ್ರವನ್ನು ಬಿಂಬಿಸುವ ಬೊಹೆಮಿನ್ ರಾಪ್ಸೋಡಿ ಹಾಗೂ ರೇಸ್ ಸಂಬಂಧಿತ ಚಿತ್ರ ಗ್ರೀನ್ ಬುಕ್ ಕೂಡಾ ಪ್ರಶಸ್ತಿ ರೇಸ್‌ನಲ್ಲಿವೆ. 91ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಾರಾ ನಿರೂಪಕರು ಇಲ್ಲದಿರುವುದು ಕೂಡಾ ನಾಲ್ಕು ದಶಕಗಳಲ್ಲಿ ಇದೇ ಮೊದಲು.

An #Oscars backstage look at @melissamccarthy and @IAMJHUD pic.twitter.com/Tvvi7dwgHO
– The Academy (@TheAcademy) February 25, 2019

ಅತ್ಯುತ್ತಮ ನಟ ಪ್ರಶಸ್ತಿಯ ರೇಸ್‌ನಲ್ಲಿ ಕ್ರಿಸ್ಟಿಯನ್ ಬಾಲೆ ಮತ್ತು ರಮಿ ಮಲೆಕ್ ಮುಂಚೂಣಿಯಲ್ಲಿದ್ದಾರೆ. ರೆಗಿನಾ ಕಿಂಗ್ ಮತ್ತು ಮಹರ್ಷಾಲಾ ಅಲಿ ತಮ್ಮ ಪೂರಕ ವರ್ಗಗಳಲ್ಲಿ ಪ್ರಶಸ್ತಿಯ ಫೇವರಿಟ್‌ಗಳೆನಿಸಿದ್ದಾರೆ. ಅಲ್ಫೋನ್ಸೊ ಕೊರಾನ್ ಉತ್ತಮ ನಿರ್ದೇಶಕ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಕಪ್ಪು- ಬಿಳುವು ಅರೆ ಆತ್ಮಚರಿತ್ರಾ ಕಥಾನಕ ರೋಮಾ ಮತ್ತು ಯೊರ್ಗೋಸ್ ಲಂತಿಮೋಸ್ ಅವರ ದ ಫೇವರಿಟ್ ಗರಿಷ್ಠ ಅಂದರೆ ತಲಾ 10 ಪ್ರಶಸ್ತಿಗಳಿಗೆ ನಾಮನಿರ್ದೇಶನ ಹೊಂದಿವೆ.

ಪ್ರಕಟವಾಗಿರುವ ಪ್ರಶಸ್ತಿಗಳ ವಿವರ:
  • ಉತ್ತಮ ಅನಿಮೇಟೆಡ್ ಕಿರುಚಿತ್ರ- ಪಿಕ್ಸರ್ ಅವರ ಬಾವೊ
  • ಉತ್ತಮ ಅನಿಮೇಟೆಡ್ ಫೀಚರ್‌ಫಿಲ್ಮ್- ಸ್ಪೈಡರ್‌ಮ್ಯಾನ್
  • ಉತ್ತಮ ಪೋಷಕ ನಟ: ಮಹರ್ಷಲಾ ಅಲಿ
  • ಉತ್ತಮ ಸಂಕಲನ: ಬೊಹೆಮಿನ್ ರಪ್ಸೊಡಿ
  • ವಿದೇಶಿ ಭಾಷಾ ಚಿತ್ರ: ಅಲ್ಫೋನ್ಸಾ ಕೌರನ್ ಅವರ ರೋಮಾ
  • ಧ್ವನಿ ಸಂಕಲನ, ಧ್ವನಿ ಮಿಶ್ರಣ: ಬೆಹೊಮಿನ್ ರೊಪ್ಸೊಡಿ ಚಿತ್ರಕ್ಕಾಗಿ ಜಾನ್ ವರಸ್ಟ್ ಮತ್ತು ನೀನಾ ಹಾರ್ಟ್‌ಸ್ಟೋನ್.
  • ಉತ್ತಮ ವಿಷುವಲ್ ಎಫೆಕ್ಟ್: ಫಸ್ಟ್‌ಮ್ಯಾನ್ ಚಿತ್ರಕ್ಕಾಗಿ ಪಾಲ್ ಲ್ಯಾಂಬರ್ಟ್, ಇಯಾನ್ ಹಂಟರ್, ತ್ರಿಸ್ತನ್ ಮೈಲ್ಸ್ ಮತ್ತು ಜೆ.ಡಿ.ಶೆವಾಲ್ಮ್
  • ಉತ್ತಮ ಸಾಕ್ಷ್ಯಚಿತ್ರ: ಪಿರೇಡ್, ಎಂಡ್ ಆಫ್ ಸೆಂಟೆನ್ಸ್

Leave a Reply

comments

Related Articles

error: