ಮೈಸೂರು

ಉರುಳಿದ ವಾಹನ : ಚಾಲಕ-ಕ್ಲೀನರ್ ಪಾರು

ಚಾಮರಾಜನಗರ ಜಿಲ್ಲೆಯ ವಿವೇಕಾನಂದ ನಗರ ಬಳಿ ಈಚರ್ ವಾಹನವೊಂದು  ಉರುಳಿ ಬಿದ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ತಮಿಳುನಾಡಿನ ಕೊಯಮತ್ತೂರಿನಿಂದ ಮೈಸೂರಿಗೆ ವಾಹನಗಳ ಬಿಡಿಭಾಗಗಳನ್ನು ಕೊಂಡೊಯ್ಯುತ್ತಿದ್ದ  ಈಚರ್ ವಾಹನ  ಶನಿವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಉರುಳಿ ಬಿದ್ದಿದೆ. ವಾಹದಲ್ಲಿದ್ದ ಚಾಲಕ ಮತ್ತು ಕ್ಲೀನರ್  ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ವಾಹನ ಉರುಳಲು ಕಾರಣ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 209 ಕಾಮಗಾರಿ ವಿಳಂಬವೇ ಕಾರಣ ಎನ್ನಲಾಗುತ್ತಿದೆ.

Leave a Reply

comments

Related Articles

error: