ಸುದ್ದಿ ಸಂಕ್ಷಿಪ್ತ

ಮಾ.3ರವರೆಗೆ ಎನ್ ಎಸ್.ಎಸ್ ವಾರ್ಷಿಕ ಶಿಬಿರ

ಮೈಸೂರು,ಫೆ.25 : ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ರಾಷ್ಟ್ರೀಯ ಸೇವಾ ಯೋಜನೆ ಜೆಎಸ್ಎಸ್ ವಿದ್ಯಾಪೀಠವು ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್  ಇವರ ಸಂಯುಕ್ತಾಶ್ರಯದಲ್ಲಿ ವಾರ್ಷಿಕ ವಿಶೇಷ ಶಿಬಿರ 2018-19 ಅನ್ನು ಇಂದಿನಿಂದ ಮಾ.3ರವರೆಗೆ ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಚಯದ್ಲಲಿ ಏರ್ಪಡಿಸಲಾಗಿದೆ.

ನಂಜನಗೂಡಿನ ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ವೈ.ಎಂ.ಸಾಸಲಾರಾಧ್ಯ ಅಧ್ಯಕ್ಷತೆ  ವಹಿಸಿದ್ದರು, ಎನ್.ಎಸ್ಎಸ್ ರಾಜ್ಯ ಪ್ರಶಸ್ತಿ ಪುರಸ್ಕೃತ ಜಿ.ರವಿಶಂಕರ್ ಮುಖ್ಯ ಅತಿಥಿಯಾಗಿದ್ದಾರೆ. ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಬಿ.ಇಳಂಗೋವನ್ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: