ಮೈಸೂರು

ಸಾರ್ವಜನಿಕರ ಕುಂದುಕೊರತೆ ಸಭೆ: ಪರಿಹಾರಕ್ಕೆ ಕ್ರಮ; ಭರವಸೆ

ಮೈಸೂರಿನ ವಿವಿಧ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಶನಿವಾರ ಸಾರ್ವಜನಿಕರ ಕುಂದು ಕೊರತೆಗಳ ಸಭೆಯನ್ನು ಏರ್ಪಡಿಸಲಾಗಿತ್ತು.

ಎನ್.ಆರ್.ಠಾಣೆಯಲ್ಲಿ ಇನ್ಸಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೀನಾಬಜಾರ್, ಇರ್ವಿನ್ ವೃತ್ತ, ಸಾಡೇ ವೃತ್ತಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಜನರು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದು, ಇದರಿಂದ ಸಮಸ್ಯೆಯುಂಟಾಗುತ್ತಿದೆ. ಶೀಘ್ರ ಪರಿಹಾರ ಒದಗಿಸಿ ಎಂದರು.

ಕೆ.ಆರ್.ಸಂಚಾರಿ ಠಾಣೆಯಲ್ಲಿ  ಇನ್ಸಪೆಕ್ಟರ್ ನಾಗೇ ಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ವಿಶ್ವಮಾನವ ಜೋಡಿ ರಸ್ತೆ ಸೇರಿದಂತೆ ಹಲವು ಕಡೆ ಓಡಾಡುವ ಜಾಗದಲ್ಲಿ ಬೈಕ್ ಗಳನ್ನು ನಿಲ್ಲಿಸಲಾಗುತ್ತದೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಮಾತುಗಳು ಕೇಳಿಬಂತು.

ದೇವರಾಜ ಮಾರುಕಟ್ಟೆ, ಕುರುಬರಹಳ್ಳಿ ಜಂಕ್ಷನ್ ಠಾಣೆಗಳಲ್ಲಿಯೂ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿದ್ದು, ಅವುಗಳನ್ನು ಶೀಘ್ರದಲ್ಲಿಯೇ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಆಯಾ ಠಾಣೆಗಳ ಇನ್ಸಪೆಕ್ಟರ್ ಗಳು ತಿಳಿಸಿದರು.

Leave a Reply

comments

Related Articles

error: