
ದೇಶಪ್ರಮುಖ ಸುದ್ದಿ
ಪ್ರತಿದಾಳಿ ನಡೆಸಿದ ಪಾಪಿ ಪಾಕಿಸ್ತಾನ: ಎರಡು ಡ್ರೋಣ್ ಹೊಡೆದುರುಳಿಸಿದ ಸೇನೆ
ನವದೆಹಲಿ,ಫೆ.26-ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಪ್ರತಿದಾಳಿ ನಡೆಸಿದೆ.
ಮಂಗಳವಾರ ಮುಂಜಾನೆ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಗುಜರಾತ್ ನ ಕಛ್ ಪ್ರದೇಶದತ್ತ ಡ್ರೋಣ್ ದಾಳಿ ನಡೆಸಲು ಮುಂದಾಗಿದೆ. ಆದರೆ ಭಾರತೀಯ ಸೇನೆ ಪಾಕ್ ನ ಡ್ರೋಣ್ ಅನ್ನು ಹೊಡೆದುರುಳಿಸಿದೆ. ಬೆಳಿಗ್ಗೆ 6.30ರ ಸುಮಾರಿಗೆ ಕಛ್ ನತ್ತ ಬಂದಿದ್ದ ಎರಡು ಡ್ರೋಣ್ ಅನ್ನು ಹೊಡೆದುರುಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಇಂದು ಮುಂಜಾನೆ 3.30ರ ಹೊತ್ತಿಗೆ ಭಾರತೀಯ ವಾಯುಸೇನೆ ಪಾಕ್ ಗಡಿಯೊಳಗೆ ನುಗ್ಗಿ ದಾಳಿ ನಡೆಸುವ ಮೂಲಕ ಪಾಕ್ ನ ಉಗ್ರರ ಅಡಗುತಾಣ ಹಾಗೂ ಸುಮಾರು 300 ಉಗ್ರರನ್ನು ನಾಶ ಮಾಡಿದೆ. ಕೇವಲ 21 ನಿಮಿಷಗಳ ಕಾರ್ಯಾಚರಣೆ ನಡೆಸಿ ಗಡಿಯೊಳಗೆ ಇದ್ದ ಉಗ್ರರ ಅಡಗುತಾಣಗಳನ್ನು ನಾಶ ಮಾಡಿದೆ.
ಅಷ್ಟೇ ಅಲ್ಲ ಪಾಕಿಸ್ತಾನದ ಮತ್ತೊಂದು ಮಾನವ ರಹಿತ ವಿಮಾನವನ್ನೂ ಕೂಡ ಭಾರತೀಯ ಸೇನೆ ಹೊಡೆದುರುಳಿಸಿದೆ. ಪಾಕಿಸ್ತಾನ ಎರಡು ವಾಯುನೆಲೆಯನ್ನು ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸಲು ನಡೆಸಿದ್ದ ಪ್ರಯತ್ನವನ್ನು ವಿಫಲಗೊಳಿಸಿದೆ. (ಎಂ.ಎನ್)