ಮೈಸೂರು

ಪಾಕ್ ಉಗ್ರಗಾಮಿ ನೆಲೆಗಳ ಮೇಲೆ‌ 1,000 ಕೆಜಿ‌ ಬಾಂಬ್ ದಾಳಿ ನಡೆಸಿದ ಭಾರತೀಯ ವಾಯುಪಡೆ : ಹೆಮ್ಮೆ ಪಡುವ ದಿನ; ಡಾ.ಬಿ.ಮಂಜುನಾಥ್

ಮೈಸೂರು,ಫೆ.26:- ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಯ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವುದೇ ಕಾರಣಕ್ಕೂ ಸೈನಿಕರ ತ್ಯಾಗ, ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಭಾರತೀಯ ವಾಯುಸೇನೆ ಗಡಿ‌ ನಿಯಂತ್ರಣ ರೇಖೆಯಲ್ಲಷ್ಟೇ ಅಲ್ಲದೆ, ಪಾಕಿಸ್ತಾನದ ಒಳಕ್ಕೂ ತೆರಳಿ ಪಾಕಿಸ್ತಾನದ ಉಗ್ರಗಾಮಿ ನೆಲೆಗಳ ಮೇಲೆ‌ 1,000 ಕೆಜಿ‌ ಬಾಂಬ್ ದಾಳಿ ನಡೆಸಿದೆ. ಅಂದಾಜು 300 ಉಗ್ರರು ಈ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಉಗ್ರ ದಾಳಿಯಿಂದ ನೋವನುಭವಿಸಿದ್ದ  ಭಾರತೀಯರಿಗೆ ಇದು ಅತ್ಯಂತ ಸಂತಸದ ವಿಚಾರ ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಮಂಜುನಾಥ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಪಾಕಿಸ್ತಾನ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದು, ಚೀನಾಗೆ ಕತ್ತೆಗಳನ್ನು ಮಾರಿ ದೇಶವನ್ನು ನಡೆಸುವ ಪರಿಸ್ಥಿತಿಯಲ್ಲಿದೆ. ಇಷ್ಟಾದರೂ ಉಗ್ರವಾದವನ್ನು ಪ್ರಾಯೋಜಿಸುವ ದುರ್ಬುದ್ಧಿಯನ್ನು ಆ ದೇಶ ಬಿಡಲೇ‌ ಇಲ್ಲ. ಈ ದಾಳಿ ಪಾಕಿಸ್ತಾನಕ್ಕೆ ತಕ್ಕ‌ ಉತ್ತರವಾಗಿದೆ. ಭಾರತೀಯ ವಾಯುದಳದ ದಾಳಿಗೆ ಉಗ್ರ ನೆಲೆಗಳು ನಾಶವಾಗುವುದಲ್ಲ, ಆವಿಯಾಗಿರಬಹುದು ಎಂದು ಸೇನಾ‌‌‌ ಮೂಲಗಳು ಅಭಿಪ್ರಾಯಪಟ್ಟಿವೆ. ಇದು ಭಾರತದ‌ ಸಾರ್ವಭೌಮತೆಗೆ‌ ಧಕ್ಕೆ ತರಲು ಪ್ರಯತ್ನಿಸುವ ಎಲ್ಲಾ ಬಾಹ್ಯ, ಆಂತರಿಕ ಶತ್ರುಗಳಿಗೆ ಈ‌ ದಾಳಿ‌ ಎಚ್ಚರಿಕೆಯ ಗಂಟೆಯಾಗಲಿದೆ. ನಮ್ಮ ವಾಯುಪಡೆ, ಸೇನಾಪಡೆಗಳ ಕುರಿತು ನಾವು ಅತ್ಯಂತ ಹೆಮ್ಮೆ ಪಡುವ ದಿನ ಇದಾಗಿದೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: