ಪ್ರಮುಖ ಸುದ್ದಿಮೈಸೂರು

ಫೆ.28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಮೈಸೂರು,ಫೆ.26 : ಅಗಸ್ತ್ಯ ಅಂತಾರಾಷ್ಟ್ರಿಯ ಪ್ರತಿಷ್ಠಾನ, ಸಂಚಾರಿ ಪ್ರಯೋಗಾಲಯ ‘ಹನಿವೆಲ್’ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಫೆ.28ರಂದು ಮೇಟಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದೆ ಎಂದು ಮಾರ್ಗದರ್ಶಿ ಶಿಕ್ಷಕ ಪ್ರದೀಪ್ ತಿಳಿಸಿದರು.

ಸಂಚಾರಿ ವಿಜ್ಞಾನ ಪ್ರಯೋಗಾಲಯದ ಮುಖಾಂತರ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಕ್ರಿಯಾಶೀಲತೆ ಸೃಜನಾತ್ಮಕತೆ, ಕುತೂಹಲ, ಆತ್ಮಸ್ಥರ್ಯ ತುಂಬವ ದಿಶೆಯಲ್ಲಿ  ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಅಂದು ಬೆಳಗ್ಗೆ 10ಕ್ಕೆ ನಡೆಯುವ ದಿನಾಚರಣೆಯಲ್ಲಿ ಸಿಎಫ್ ಟಿ.ಆರ್.ಐ ಸೂಕ್ಷ್ಮಾಣು ಜೀವಿ ವಿಜ್ಞಾನಿ ಡಾ.ಅನು ಅಪ್ಪಯ್ಯ, ಮೈವಿವಿಯ ಈ.ಎಂ.ಆರ್.ಸಿ. ಭೂ ವಿಜ್ಞಾನಿ ಬಾಲಸುಬ್ರಮಣ್ಯ ಇವರುಗಳು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದು ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಅಗ್ನಿ ಅವಘಟಗಳ ಕುರಿತು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಗಂಗಾ ನಾಯಕ್ ಪ್ರತ್ಯಕ್ಷಿಕೆ ನಡೆಸುವರು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ ಇರಲಿದ್ದು, ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ.ಕೃಷ್ಣ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಶಾಲೆಯ ಮುಖ್ಯಸ್ಥರಾದ ನವೀನ್ ಕುಮಾರ್, ಶಿಕ್ಷಕ ರಘು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: