ಪ್ರಮುಖ ಸುದ್ದಿಮೈಸೂರು

ಜಿ.ಪಂ ಅಧ್ಯಕ್ಷರಾಗಿ ಪರಿಮಳ ಶ್ಯಾಮ್ ಆಯ್ಕೆ : ಹರ್ಷ

ಅಲ್ಪಸಂಖ್ಯಾತ ಸಮುದಾಯಕ್ಕೆ ರಾಜಕೀಯ ಪ್ರತಿನಿಧ್ಯ

ಮೈಸೂರು,ಫೆ.26 : ನಾಮಧಾರಿ ಗೌಡ ಸಮಾಜದ ಪರಿಮಳ ಶ್ಯಾಮ್ ಅವರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಅಖಿಲ ನಾಮಧಾರಿಗೌಡ ಸಂಘ ಮೈಸೂರು ಶಾಖೆಯು ಹರ್ಷ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸಿ.ಜಿ.ನಾಗರಾಜು ಅವರು ಕೃತಜ್ಞತೆ ವ್ಯಕ್ತಪಡಿಸಿ, ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ತಮ್ಮ ಸಮಾಜವು ರಾಜಕೀಯವಾಗಿ ಕಡೆಗಣಿಸಲಾಗಿತ್ತು, ಇದೇ ಮೊದಲ ಬಾರಿಗೆ ಸಮಾಜಕ್ಕೆ ಪ್ರತಿನಿಧ್ಯ ನೀಡಿರುವುದಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಾ.ರಾ.ಮಹೇಶ್, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರಿಗೆ, ಹೆಚ್.ವಿಶ್ವನಾಥ್ ಸೇರಿದಂತೆ ಪಕ್ಷದ ವರಿಷ್ಠರಿಗೆ ಹಾಗೂ ಮುಖಂಡರಿಗೆ ಸಮಾಜದ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

ಸಮಾಜದ ಮುಖಂಡರಾದ ಎಸ್.ಸಿ.ಲೋಹಿತಾಶ್ವ ಅವರು ಮಾತನಾಡಿ, ಸಮಾಜವನ್ನು 2ಎ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಹಾಗೂ ರಾಜಕೀಯ, ಸಾಮಾಜಿಕ ಪ್ರಾತಿನಿಧ್ಯ ನೀಡಬೇಕೆಂದು ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಪಿ.ಚನ್ನರೇವಣ್ಣ, ಸಂಘಟನಾ ಕಾರ್ಯದರ್ಶಿ ಎಂ.ಎನ್.ಸೋಮಶೇಖರ್ ಮತ್ತಿತರರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: