ಮೈಸೂರು

ಶಾಲಾ ವಿದ್ಯಾರ್ಥಿಗಳಿಂದ ಬೈಕ್ ಕಳ್ಳತನ

ಶಾಲಾ ವಿದ್ಯಾರ್ಥಿಗಳು ಎಎಸ್ಐ ಓರ್ವರ ಬೈಕ್ ಕದ್ದು, ಸಿಕ್ಕಿಬಿದ್ದ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.

ಕುವೆಂಪುನಗರಠಾಣಾ ವ್ಯಾಪ್ತಿಯ ಜ್ಞಾನಗಂಗಾ ಶಾಲೆಯ 9 ಮತ್ತು ಹತ್ತನೆಯ ತರಗತಿಯ ವಿದ್ಯಾರ್ಥಿಗಳೆನ್ನಲಾದ ಇಬ್ಬರು ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಎಎಸ್ಐ ಓರ್ವರ ಪ್ಲಶರ್ ಬೈಕ್ ನ್ನು ಕಳ್ಳತನ ಮಾಡಿ, ಅವರ ಮನೆ ಪಕ್ಕದಲ್ಲಿರುವ ಗ್ಯಾರೇಜೊಂದಕ್ಕೆ ರಿಪೇರಿಗೆ ನೀಡಿದ್ದರು ಎನ್ನಲಾಗಿದೆ. ಬೈಕ್ ಕಳ್ಳತನವಾದ ತಕ್ಷಣ ಎಎಸ್ಐ ಬೈಕ್ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು. ಇದನ್ನು ತಿಳಿದ ಗ್ಯಾರೇಜ್ ಮಾಲಿಕ ತಕ್ಷಣ ಬೈಕ್ ನ್ನು ಗ್ಯಾರೇಜಿಗೆ ರಿಪೇರಿಗೆ ಇಬ್ಬರು ಹುಡುಗರು ತಂದಿರುವುದಾಗಿ ತಿಳಿಸಿದ್ದು, ಯಾರೆಂಬುದನ್ನು ಪತ್ತೆ ಹಚ್ಚಲಾಗಿತ್ತು. ಲಭಿಸಿದ ಮಾಹಿತಿಯ ಪ್ರಕಾರ ಅವರು ಜ್ಞಾನಗಂಗಾ ಶಾಲೆಯ ವಿದ್ಯಾರ್ಥಿಗಗಳೆನ್ನುವುದು ತಿಳಿದು ಬಂದಿತ್ತು ಎನ್ನಲಾಗಿದೆ.

ಶಾಲೆಗೆ ತೆರಳಿದ ಎಎಸ್ಐ  ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ನೀತಿ ಪಾಠ ಬೋಧಿಸಿ ಬಂದಿದ್ದರು ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಮಾಧ್ಯಮಕ್ಕೆ ತಿಳಿಸಿದರು.

ಆದರೆ ಪೊಲೀಸರು ಶಾಲೆಗೆ ತೆರಳಿ ಉದ್ದುದ್ದ ಕೂದಲು ಬಿಟ್ಟಿರುವ, ಕಿವಿಗೆ ರಿಂಗ್  ಧರಿಸಿರುವ ವಿದ್ಯಾರ್ಥಿಗಳನ್ನು ಥಳಿಸಿದ್ದು, ಇದನ್ನು ತಿಳಿದ ಪೋಷಕರು ಶಾಲೆಗೆ ಆಗಮಿಸಿ, ಶಾಲೆಯವರೇ ತಮ್ಮ ಮಕ್ಕಳ ವಿರುದ್ಧ ಪೊಲೀಸರಿಗೆ ತಿಳಿಸಿ ಹೊಡೆಸಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಹಾಗೂ  ಪೊಲೀಸರ  ವಿರುದ್ಧವೇ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

comments

Related Articles

error: