ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರು-ಬೆಳಗಾವಿ ವಿಮಾನ ಸೇವೆ ಸ್ಟಾರ್ ಏರ್ಲೈನ್ಸ್ ಆರಂಭ

ಬೆಂಗಳೂರು (ಫೆ.26): ಸ್ಟಾರ್ ಏರ್ಲೈನ್ಸ್ ಸಂಸ್ಥೆಯಿಂದ ಬೆಂಗಳೂರು – ಬೆಳಗಾವಿ ನಡುವೆ ವಿಮಾನಯಾನ ಸೇವೆಯನ್ನು ಆರಂಭ ಮಾಡಿದೆ. ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳು ಸ್ಟಾರ್ ಏರ್ಲೈನ್ಸ್ ವಿಮಾನ ಸೇವೆ ಇರಲಿದೆ.

ಬೆಂಗಳೂರಿನಿಂದ ಮಧ್ಯಾಹ್ನ 1:25 ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 2.30 ಕ್ಕೆ ಬೆಳಗಾವಿ ತಲುಪಲಿದೆ. ಅದೇ ವಿಮಾನ ಬೆಳಗಾವಿಯಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ಸಂಜೆ 4.05 ಕ್ಕೆ ಬೆಂಗಳೂರು ಸೇರಲಿದೆ. ಸ್ಟಾರ್ ಏರ್ಲೈನ್ಸ್ ಸಂಸ್ಥೆ ಟಿಕೆಟ್ ದರ ರೂ. 1999 ನಿಗದಿಪಡಿಸಲಾಗಿದೆ. ಮಂಗಳವಾರ ಹೊರತುಪಡಿಸಿ ವಾರದ ಎಲ್ಲ ದಿನಗಳು ವಿಮಾನಯಾನ ಸೇವೆ ಇರುತ್ತದೆ.

ಬೆಳಗಾವಿಯಲ್ಲಿ ಸೋಮವಾರ ವಿಮಾನಯಾನ ಸೇವೆಗೆ ಚಾಲನೆ ನೀಡಲಾಗಿದೆ. ಸಚಿವ ಆರ್.ವಿ. ದೇಶಪಾಂಡೆ, ಸಂಸದರಾದ ಪ್ರಭಾಕರ ಕೋರೆ, ಪ್ರಕಾಶ್ ಹುಕ್ಕೇರಿ, ಸ್ಟಾರ್ ಸಂಸ್ಥೆಯ ಅಧ್ಯಕ್ಷ ಸಂಜಯ್ ಘೋಡಾವತ್ ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: