ಮೈಸೂರು

ಜ.22 :ಅರವಳಿಕೆ ಜನಜಾಗೃತಿ ಕಾರ್ಯಕ್ರಮ

ಬೃಂದಾವನ ಆಸ್ಪತ್ರೆ ವತಿಯಿಂದ ಜನಜಾಗೃತಿ ಮೂಡಿಸಲು ಜ.22 ರಂದು ಸಂಜೆ 5 ಗಂಟೆಗೆ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಬೃಂದಾವನ ಆಸ್ಪತ್ರೆಯ ಅರವಳಿಕೆ ತಜ್ಞೆ ಡಾ.ರಾಣಿ ಹೇಳಿದರು.

ಶನಿವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಳಿಕೆಯ ತಪ್ಪು ತಿಳುವಳಿಕೆಗಳು, ಪಾರ್ಶ್ವವಾಯು- ಇದರ ತುರ್ತು ಸೂಕ್ತ ಚಿಕಿತ್ಸೆ ಮತ್ತು ನಿರ್ವಹಣೆ, ಪ್ರಸೂತಿ ನೋವಳಿಕೆ ಮತ್ತು ಜನರ ನಡುವೆ ಗ್ರಹಿಕೆ, ಮತ್ತು ಬೃಂದಾವನ ಆಸ್ಪತ್ರೆ ಸಿಬ್ಬಂದಿ ವರ್ಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೃಂದಾವನ ಆಸ್ಪತ್ರೆಯ ಅರವಳಿಕೆ ತಜ್ಞ ಡಾ.ಗುರುರಾಜ್ ಹಾಜರಿದ್ದರು.

Leave a Reply

comments

Related Articles

error: