ಮೈಸೂರು

ಅಂತರ್ಜಲ ಕುರಿತು ಉಪನ್ಯಾಸ

ಮೈಸೂರು, ಫೆ.27:-  ಮೈಸೂರು ಜಿಲ್ಲೆಯ ಇಲವಾಲ ಹೋಬಳಿ, ಯಲಚನಹಳ್ಳಿ ಗ್ರಾಮದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ಬೆಂಗಳೂರು ಮತ್ತು ಹಿರಿಯ ಭೂವಿಜ್ಞಾನಿ, ಮೈಸೂರು ಜಿಲ್ಲಾ ಅಂತರ್ಜಲ ಕಛೇರಿ ವತಿಯಿಂದ ಆಯೋಜಿಸಿದ್ದ ಅಂತರ್ಜಲ ಜನ ಜಾಗೃತಿ ಶಿಬಿರವನ್ನು ಇತ್ತೀಚೆಗೆ ಗುಂಗ್ರಾಲ್‍ಛತ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇವನಾಯಕ್ ರವರು ಉದ್ಘಾಟಿಸಿ ಕರಪತ್ರವನ್ನು ಬಿಡುಗಡೆ ಮಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಅರುಣ್‍ಕುಮಾರ್ ಅವರಿಂದ ಅಂತರ್ಜಲ ಕುರಿತ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ವಿಷಯ ಪರಿಣಿತರಿಂದ ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸಗಳನ್ನು ನೀಡಿ ಸರ್ವಜನಿಕರಿಗೆ, ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಮೂಡಿಸಲಾಯಿತು ಮತ್ತು ವಾಸುದೇವನ್ ಅವರಿಂದ ಅಂತರ್ಜಲ ಜನಜಾಗೃತಿ ಕುರಿತಂತೆ, ಮ್ಯಾಜಿಕ್ ಶೋ & ಪಪ್ಪೆಟ್ ಶೋ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರಭಾಕರ್, ಕಬ್ಬುಬೆಳೆಗಾರರ ಹಿತರಕ್ಷಣ ಸಮಿತಿ ಅಧ್ಯಕ್ಷ ಮಾದಪ್ಪ, ಗುಂಗ್ರಾಲ್‍ಛತ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೃಷಬೇಂದ್ರ, ವಿಷಯ ಪರಿಣಿತರಾದ ರಾಮನಗರ ಗೌಸಿಯಾ ಇಂಜಿನೀಯರಿಂಗ್ ಕಾಲೇಜು ಉಪನ್ಯಾಸಕರಾದ ಡಾ.ಎ.ವಿ.ಗಣೇಶ್, ಮೈಸೂರು ಗ್ರಾಮೀಣ ಕುಡಿಯುವ ನೀರು ಸರಬರಾಜು & ನೈರ್ಮಲ್ಯ ವಿಭಾಗದ ಹಿರಿಯ ಭೂವಿಜ್ಞಾನಿ  ಪ್ರಾಣೇಶ್ ರಾವ್, ಮೈಸೂರು ಎಸ್.ಐ.ಯು.ಡಿ ವಿಷಯ ಪರಿಣತರಾದ ರಮೇಶ್, ತೋಟಗಾರಿಕೆ ಮಹಾ ವಿದ್ಯಾಲಯದ ಪ್ರಭಾರ ಡೀನ್ ಕೃಷ್ಣಮೂರ್ತಿ, ತನ್ವೀರ್ ಅಹಮ್ಮದ್, ಭೂವಿಜ್ಞಾನಿ ಶೋಭಾರಾಣಿ ಪಿ.ಎಸ್, ಮೈಸೂರು ಜಿಲ್ಲಾ ಅಂತರ್ಜಲ ಕಛೇರಿಯ ಹಿರಿಯ ಭೂವಿಜ್ಞಾನಿ ಕೆ.ವಿ.ಆರ್ ಚೌಧರಿ, ಮಡಿಕೇರಿ ಜಿಲ್ಲಾ ಅಂತರ್ಜಲ ಕಛೇರಿಯ ಹಿರಿಯ ಭೂವಿಜ್ಞಾನಿ ಸೌಮ್ಯ.ಕೆ.ಜಿ, ಸಾರ್ವಜನಿಕರು, ರೈತರು ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: