ಮೈಸೂರು

ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ

ಮೈಸೂರು, ಫೆ.27:-  ಶ್ರೀರಂಗಪಟ್ಟಣ ರೈಲು ನಿಲ್ದಾಣದ ರೈಲ್ವೆ ಕಿ.ಮೀ ನಂ. 122/900 ರ ಉತ್ತರ ಕಾವೇರಿ ಸೇತುವೆ ಹತ್ತಿರ ಸುಮಾರು 35 ರಿಂದ 40 ವರ್ಷದ ವ್ಯಕ್ತಿಯೋರ್ವರು ಫೆಬ್ರವರಿ 26 ರಂದು ಮೃತಪಟ್ಟಿರುತ್ತಾರೆ. ಮೃತ ದೇಹವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮೈಸೂರು ರೈಲ್ವೆ ಪೊಲೀಸ್ ಠಾಣೆಯವರು ತನಿಖೆ ಕೈಗೊಂಡಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ.

 ಅಪರಿಚಿತ ವ್ಯಕ್ತಿಯ ಚಹರೆ ಇಂತಿದೆ

ಎತ್ತರ 5.6 ಅಡಿ, ಸದೃಢವಾದ ಮೈಕಟ್ಟು, ದುಂಡುಮುಖ, ಗೋದಿ ಮೈಬಣ್ಣ, ಸುಮಾರು 1. ಇಂಚು ಉದ್ದದ  ಕಪ್ಪು-ಬಿಳಿ ತಲೆ ಕೂದಲು, 1 ಇಂಚು ಕುರುಚಲು ಗಡ್ಡ, ಮಿಸೆ ಬಿಟ್ಟಿದ್ದಾರೆ. ಬಲಗೈ ತೋಳಿನ ಮೇಲೆ ನಾಗರಹಾವು ಎಂದು ಮತ್ತು ಎಡಗೈ ತೋಳಿನ ಮೇಲೆ ಶಿವಪ್ಪ ಮತ್ತು ಬಲರಾಮ ಎಂದು ಹಾಗೂ ಬಲ ಎದೆಯಲ್ಲಿ ಪದ್ಮಮ್ಮ, ಎಡ ಎದೆಯಲ್ಲಿ ಚಿನ್ನು ಎಂದು ಹಚ್ಚೆ ಗುರುತು ಇದ್ದು, ತಿಳಿ ಗುಲಾಬಿ ಬಣ್ಣದ ಚೌಕಳಿ ಇರುವ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್  ಧರಿಸಿರುತ್ತಾರೆ.

ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೆ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: