ಮೈಸೂರು

ಮಾರ್ಚ್ 2ರಿಂದ ಶ್ರೀರಾಮಾಯಣ ದರ್ಶನಂ ನಾಟಕದ ಎರಡನೇ ಹಂತದ ಪ್ರವಾಸ ಮತ್ತು ಪ್ರದರ್ಶನ ಆರಂಭ : ಭಾಗೀರಥಿ ಬಾಯಿ ಕದಂ

ಮೈಸೂರಿನಲ್ಲಿ ಮಾರ್ಚ್ 5ಮತ್ತು 7ರಂದು ಪ್ರದರ್ಶನ

ಮೈಸೂರು,ಫೆ.27:- ಶ್ರೀರಾಮಾಯಣ ದರ್ಶನಂ ನಾಟಕದ ಎರಡನೇ ಹಂತದ ಪ್ರವಾಸ ಮತ್ತು ಪ್ರದರ್ಶನವನ್ನು ಮಾರ್ಚ್ 2ರಿಂದ ಆರಂಭಿಸಲಾಗುತ್ತಿದ್ದು, ದಾವಣಗೆರೆಯ ಸ್ಥಳೀಯ ರಂಗತಂಡಗಳ ಸಹಕಾರದೊಂದಿಗೆ ಬಾಪೂಜಿ ರಂಗಂದಿರದಲ್ಲಿ ಶ್ರೀರಾಮಾಯಣ ದರ್ಶನಂ ನಾಟಕ ಪ್ರದರ್ಶನದ ಮೂಲಕ 2ನೇ ಹಂತದ ಪ್ರವಾಸ ಆರಂಭಿಸುತ್ತಿದ್ದೇವೆ ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ತಿಳಿಸಿದರು.

ರಂಗಾಯಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಶ್ರೀರಾಮಾಯಣ ದರ್ಶನಂ ರಂಗಪ್ರಸ್ತುತಿಯು ಈಗಾಗಲೇ ನಾಡಿನಾದ್ಯಂತ ಮೂವತ್ತು ಪ್ರದರ್ಶನಗಳನ್ನು ಯಶಸ್ವಿಯಾಗಿ ನೀಡಿ ಜನಮಾನಸಕ್ಕೆ ಅನೂಹ್ಯವಾದ ಕುವೆಂಪು ಅವರ ದರ್ಶನವನ್ನು ನೀಡಿರುವುದು ರಂಗಭೂಮಿ ಹಾಗೂ ಸಾಂಸ್ಕೃತಿಕ ಲೋಕದ ಹೆಗ್ಗಳಿಕೆ. ಅಪಾರ ಸಂಖ್ಯೆಯಲ್ಲಿ ಸಹೃದಯ ಪ್ರೇಕ್ಷಕರು ಆಗಮಿಸಿ ಹರಸಿ ಹೃದಯ ತುಂಬಿಕೊಂಡು ವಿಶಿಷ್ಟವಾದ ಸಂವೇದನಶೀಲ ಅನುಭವವನ್ನು ಪಡೆದಿರುವುದು ಸಹೃದಯ ಪ್ರೇಕ್ಷಕರ ಆಶೀರ್ವಾದ. ಈ ಮಹಾಕಾವ್ಯವನ್ನು ಹಿರಿಯ ಕಲಾವಿದರಾದ ಜಗದೀಶ್ ಮನೆವಾರ್ತೆ ಕೃಷ್ಣಕುಮಾರ್ ನಾರ್ಣಕಜೆ ಅವರೇ ರಂಗರೂಪಕ್ಕಿಳಿಸಿದ್ದಾರೆ. ಭಾರತೀಯ ರಂಗಶಿಕ್ಷಣ ಕೇಂದ್ರದ ಶಿಕ್ಷಕ ಉಮೇಶ್ ಸಾಲಿಯಾನ್ ಸಹ ನಿರ್ದೇಶನ ಮಾಡಿದ್ದಾರೆ. ಹಿರಿಯ ರಂಗಕರ್ಮಿ ಕೆ.ಜಿ.ಮಹಾಬಲೇಶ್ವರ ಅವರ ನಿರ್ದೇಶನದಲ್ಲಿ ಸಿದ್ದಗೊಂಡಿರುವ ಈ ವಿಶಿಷ್ಟ ರಂಗಪ್ರಯೋಗಕ್ಕೆ ಮೈಸೂರು ರಂಗಪ್ರೇಮಿಗಳು ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದರು. ಮೈಸೂರಿನಲ್ಲಿ ಮಾರ್ಚ್ 5ಮತ್ತು 7ರಂದು ಸಂಜೆ 6ಕ್ಕೆ  ರಂಗಾಯಣದ ಭೂಮಿಗೀತದಲ್ಲಿ, ಮಾರ್ಚ್ 11ರಂದು ಸಂಜೆ 6ಕ್ಕೆ ಕುಕ್ಕೇಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಕುಸುಮಸಾರಂಗ ರಂಗಮಂದಿರದಲ್ಲಿ, ಮಾರ್ಚ್ 13ರಂದು ಸಂಜೆ ಕ್ಕೆ ಮುದ್ರಾಡಿಯ ಚೌಟರ ಬಯಲಿನಲ್ಲಿ, ಮಾರ್ಚ್ 17ರಂದು ಸಂಜೆ 6ಕ್ಕೆ ಎಂಜಿಎಂ ಕಾಲೇಜಿನ ಮುದ್ದಣಮಂಟಪದಲ್ಲಿ, ಮಾರ್ಚ್ 19ರಂದು ಸಂಜೆ 6ಕ್ಕೆ ಮಂಗಳೂರಿನ ಪುರಭವನದಲ್ಲಿ , ಮಾರ್ಚ್ 22ರಂದು ಸಂಜೆ ರಾಮನಗರದ ಬಯಲು ರಂಗಮಂದಿರದಲ್ಲಿ, ಮಾರ್ಚ್ 25ರಂದು ಸಂಜೆ 6ಕ್ಕೆ ಹುಣಸೂರಿನ ಟ್ಯಾಲೆಂಟ್ ಶಾಲಾ ಆವರಣದಲ್ಲಿ, ಮಾರ್ಚ್ 28ರಂದು ಸಂಜೆ 6ಕ್ಕೆ ಬೆಂಗಳೂರಿನ ಕುವೆಂಪು ಕಲಾ ಕ್ಷೇತ್ರದಲ್ಲಿ, ಮಾರ್ಚ್ 30 ರ ಸಂಜೆ 6ಕ್ಕೆ ಗೌರಿಬಿದನೂರಿನ ಡಾ.ಹೆಚ್.ಎನ್.ಕಲಾ ಕ್ಷೇತ್ರದಲ್ಲಿ, ಏಪ್ರೀಲ್ 2ರಂದು ಸಂಜೆ 6ಕ್ಕೆ ಚನ್ನಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ, ಏಪ್ರೀಲ್ 5ಮತ್ತು 6ರಂದು ಸಂಜೆ 6ಕ್ಕೆ ಬೆಂಗಳುರು ಕಲಾಗ್ರಾಮ ಮಲ್ಲತ್ತಹಳ್ಳಿಯಲ್ಲಿ, ಏಪ್ರೀಲ್ 9,12,14,17,19 ರಂದು ಸಂಜೆ 6ಕ್ಕೆ ಮೈಸೂರು ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನ ಕಾಣಲಿದೆ ಎಂದರು.

ಇದೇ ವೇಳೆ ಪೋಸ್ಟರ್ ಗಳನ್ನು ಬಿಡುಗಡೆಗೊಳಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: