ಮೈಸೂರು

ಏಪ್ರಿಲ್ 10 ರಿಂದ ಮೈವಿವಿಯ ಪದವಿ ಪರೀಕ್ಷೆ: ಅಧಿಸೂಚನೆ ಪ್ರಕಟ      

ಮೈಸೂರು, ಫೆ.27 : ಮೈಸೂರು ವಿಶ್ವವಿದ್ಯಾನಿಲಯ ಪದವಿ ಕಾಲೇಜುಗಳಿಗೆ 2019 ರ ಏಪ್ರಿಲ್-ಮೇ  ಮಾಹೆಯಲ್ಲಿ ನಡೆಯಲಿರುವ  (CBCS/Non CBCS)     2, 4 ಮತ್ತು 6ನೇ ಸೆಮಿಸ್ಟರ್‍ನ ಮತ್ತು ವಾರ್ಷಿಕ ಪರೀಕ್ಷೆಗಳ ಬಿ.ಎ, ಬಿ.ಎಸ್ಸಿ, ಬಿ.ಎ.  (Fine Arts),    , ಬಿ.ಪಿ.ಎ, ಬಿ.ವಿ.ಎ  (Visual Arts), , ಕಾವ   (CAVA), , ಬಿ.ಕಾಂ, ಬಿ.ಬಿ.ಎಂ./ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ., ಬಿ.ಟಿ.ಹೆಚ್  (THM & TTM),  ಬಿ.ಎಸ್ಸಿ. (ವಾಕ್ ಮತ್ತು ಶ್ರವಣ) ಬಿ.ಎಸ್.ಎಡ್.,  (H & I),    , ಮತ್ತು ಬಿ.ಸಿ.ಎ. ಪದವಿ ಪರೀಕ್ಷೆಗಳು ದಿನಾಂಕ:10-04-2019 ರಿಂದ ಪ್ರಾರಂಭವಾಗಲಿದೆ.

ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ಮತ್ತು ಭರ್ತಿಮಾಡಿದ ಅರ್ಜಿಗಳನ್ನು ಕಾಲೇಜಿಗೆ ಸಲ್ಲಿಸಲು ಕೊನೆಯ ದಿನಾಂಕ 16.03.2019, ಆನ್‍ಲೈನ್ ಮೂಲಕ ಪರೀಕ್ಷಾ ಅರ್ಜಿಗಳನ್ನು ಕಾಲೇಜಿನವರು ಭರ್ತಿ ಮಾಡಲು ಕೊನೆ ದಿನಾಂಕ  20.03.2019, ಪರೀಕ್ಷಾ ಶುಲ್ಕವನ್ನು ಚಲನ್ ಮೂಲಕ ಪರೀಕ್ಷಾ ಖಾತೆಗೆ ಪರೀಕ್ಷಾ ಖಾತೆ ಸಂಖ್ಯೆ: 54007591200   (Examination Account) SBI, University Campus, Mysuru ಗೆ ಪಾವತಿಸಿ, ನಂತರ ಚಲನ್ ಪ್ರತಿಯನ್ನು ಕಳುಹಿಸಲು ಕೊನೆಯ ದಿನಾಂಕ 26.03.2019, ಪ್ರವೇಶ ಪತ್ರಗಳನ್ನು ಮುದ್ರಿಸಿಕೊಂಡು ವಿಶ್ವವಿದ್ಯಾನಿಲಯದ ಅನುಮೋದನೆ ಪಡೆಯಲು ಕೊನೆಯ ದಿನಾಂಕ 03.04.2019 ಆಗಿರುತ್ತದೆ.

ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ದಿನಾಂಕ:11-03-2019 ರಿಂದ ದಿನಾಂಕ: 30-03-2019ರೊಳಗೆ ಪೂರ್ಣಗೊಳಿಸುವುದು ಮತ್ತು ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕದ ಜೊತೆಗೆ ಅಂಕಪಟ್ಟಿ ಶುಲ್ಕ ರೂ.290/- ಅನ್ನು ಸಹ ಪಾವತಿಸಬೇಕು ಹೆಚ್ಚಿನ ಮಾಹಿತಿಗೆ ಕಾಲೇಜಿನ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: