ದೇಶಪ್ರಮುಖ ಸುದ್ದಿ

ಪಾಕ್ ಯುದ್ಧ ವಿಮಾನ ಎಫ್-16 ಹೊಡೆದುರುಳಿಸಿದ ಭಾರತ

ಜಮ್ಮು-ಕಾಶ್ಮೀರ,ಫೆ.27ಪಾಕಿಸ್ತಾನದ ವಾಯು ಸೇನೆಯ ಎಫ್-16 ಯುದ್ಧ ವಿಮಾನವನ್ನು ಭಾರತದ ವಾಯು ಸೇನೆ ಹೊಡೆದುರುಳಿಸಿದೆ.

ಪಾಕಿಸ್ತಾನ ವಲಯದ 3 ಕಿ.ಮೀ ವ್ಯಾಪ್ತಿಯಲ್ಲಿ ಎಫ್‌–16 ವಿಮಾನ ಪತನಗೊಂಡಿದ್ದು, ಹೊಡೆದುರುಳಿಸಲಾದ ಯುದ್ಧ ವಿಮಾನದಿಂದ ಪ್ಯಾರಾಚೂಟ್‌ ತೆರೆದುಕೊಂಡಿರುವುದನ್ನು ಗಮನಿಸಲಾಗಿದೆ. ಪೈಲಟ್‌ ಸ್ಥಿತಿ ತಿಳಿದು ಬಂದಿಲ್ಲ.

ಭಾರತೀಯ ವಾಯು ವಲಯ ಉಲ್ಲಂಘಿಸಿ ಬಂದಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸುವ ಪ್ರಯತ್ನ ನಡೆಸಿದ್ದು, ಭಾರತೀಯ ವಾಯುಪಡೆ ತಕ್ಕ ಪ್ರತ್ಯುತ್ತರದ ಮೂಲಕದ ಜೆಟ್‌ಗಳನ್ನು ಹಿಮ್ಮೆಟಿಸಿರುವುದಲ್ಲದೆ ಒಂದು ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ.

ಭಾರತದೊಳಗೆ ನುಗ್ಗಿ ಮತ್ತೆ ವಾಪಾಸ್‌ ಆಗುತ್ತಿದ್ದ ಪಾಕಿಸ್ತಾನ ವಾಯುಪಡೆಯ ಎಫ್‌–16 ಯುದ್ಧ ವಿಮಾನದ ಮೇಲೆ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ದಾಳಿ ನಡೆಸಿ ಹೊಡೆದುರುಳಿಸಿವೆ.

ಭಾರತದ ವಾಯು ವಲಯವನ್ನು ದಾಟಿ ಮರಳುವ ಮುನ್ನ ಪಾಕಿಸ್ತಾನ ಯುದ್ಧ ವಿಮಾನಗಳು ಬಾಂಬ್‌ಗಳನ್ನು ಎಸೆದಿವೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಪ್ರದೇಶದಲ್ಲಿ ಭಾರತೀಯ ಸೇನಾ ವಲಯದ ಮೇಲೆ ಬಾಂಬ್‌ಗಳನ್ನು ಎಸೆಯಲಾಗಿದೆ.

ಬಾಂಬ್‌ ದಾಳಿಯಿಂದಾಗಿ ಸಂಭವಿಸಿರುವ ಹಾನಿ, ಪ್ರಾಣಾಪಾಯಗಳ ಬಗ್ಗೆ ತಕ್ಷಣ ಮಾಹಿತಿ ಲಭ್ಯವಾಗಿಲ್ಲ. ಬುಧವಾರ ಬೆಳಿಗ್ಗೆ ನೌಶೆರಾ ಮತ್ತು ಪೂಂಚ್‌ ವಲಯದ ವಾಯುಭಾಗದಲ್ಲಿ ಪಾಕಿಸ್ತಾನದ ಜೆಟ್‌ಗಳು ಕಾಣಿಸಿಕೊಂಡಿವೆ.

ಭಾರತದ ವಾಯುಸೇನೆ ಮಂಗಳವಾರ ಬಾಲಕೋಟ್, ಮುಜಫರಾಬಾದ್ ಮತ್ತು ಡಾಕೋಟಿಯಲ್ಲಿ ಉಗ್ರರ ನೆಲೆಗಳನ್ನು ನಾಶ ಮಾಡಿದ ಮೇಲೆ ಪಾಕಿಸ್ತಾನ ಪ್ರಥಮ ಬಾರಿಗೆ ಪ್ರತಿದಾಳಿ ಮಾಡಿದೆ. ಭಾರತದ ಸೇನಾಪಡೆ ಕೂಡ ಸಂಪೂರ್ಣ ಸಿದ್ಧತೆಯಲ್ಲಿದ್ದು, ಈ ದಾಳಿಗೆ ಕೂಡ ತಿರುಗೇಟು ನೀಡಲು ತಯಾರಾಗಿದೆ. ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ಹಲವಾರು ರಾಷ್ಟ್ರಗಳು ಪ್ರತಿದಾಳಿ ನಡೆಸದಂತೆ ಪಾಕಿಸ್ತಾನಕ್ಕೆ ಕಿವಿಮಾತು ಹೇಳಿದ್ದರೂ ಪಾಕ್ ಕೇಳುವ ಸ್ಥಿತಿಯಲ್ಲಿ ಇಲ್ಲ. (ಎಂ.ಎನ್)

Leave a Reply

comments

Related Articles

error: