ದೇಶಪ್ರಮುಖ ಸುದ್ದಿ

ಯಲಹಂಕ ವಾಯುನೆಲೆಯಿಂದ 53 ಏರ್‌ಜೆಟ್‌ಗಳ ರವಾನೆ: ರಾಜ್ಯದಲ್ಲಿ ಹೈ ಅಲರ್ಟ್

ಬೆಂಗಳೂರು (ಫೆ.27): ಯಲಹಂಕದ ವಾಯುನೆಲೆಯಿಂದ 53 ಏರ್‌ಜೆಟ್‌ಗಳು ಗ್ವಾಲಿಯರ್‌ ಏರ್‌ಫೋರ್ಸ್‌ ಸ್ಟೇಷನ್‌ಗೆ ರವಾನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ನಮ್ಮ ಮೆಟ್ರೋ ಸೇರಿದಂತೆ ಅತಿ ಹೆಚ್ಚು ಜನರು ಓಡಾಡುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ವಿಚಾರಣೆ ನಡೆಸಲಾಗುತ್ತದೆ.

ಭಾರತದ ವಾಯು ಪ್ರದೇಶ ಪ್ರವೇಶಿಸಿದ ಪಾಕಿಸ್ತಾನ ವಿಮಾನವೊಂದನ್ನು ಹೊಡೆದುರುಳಿಸಿದ್ದು, ಪೈಲಟ್ ಪರಾರಿಯಾಗಿದ್ದಾನೆ, ಆತನ ಹುಡುಕಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ಭಾರತದಿಂದ ಪಾಕಿಸ್ತಾನಕ್ಕೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಹಲವು ವಿಮಾನ ನಿಲ್ದಾಣಗಳಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.   (ಎನ್.ಬಿ)

Leave a Reply

comments

Related Articles

error: