ಪ್ರಮುಖ ಸುದ್ದಿಮೈಸೂರು

ನೂತನ ತಂತ್ರಜ್ಞಾನವುಳ್ಳ ರಾಜ್ಯ ಮೊಟ್ಟ ಮೊದಲ ಮೈಸೂರು ಮೆಗಾ ಡೇರಿ ವಿಶೇಷತೆಯೇನು ಗೊತ್ತಾ ?

ನಗರದ ಆಲನಹಳ್ಳಿ ರಸ್ತೆಯಲ್ಲಿರುವ ಸುಸಜ್ಜಿತ ಡೈರಿ ಮಾ.1ರಂದು ಲೋಕಾರ್ಪಣೆ

ಮೈಸೂರು,ಫೆ.27 :  ಅತ್ಯಾಧುನಿಕ ತಂತ್ರಜ್ಞಾನವುಳ್ಳ ರಾಜ್ಯದ ಮೊಟ್ಟ ಮೊದಲ  ನೂತನ ‘ಮೈಸೂರು ಮೆಗಾ ಡೇರಿ’ಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಾ.1ರಂದು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಎಸ್.ವಿಜಯಕುಮಾರ್ ತಿಳಿಸಿದರು.

ನಗರದ ಬನ್ನೂರು ರಸ್ತೆಯ ಆಲನಹಳ್ಳಿಯಲ್ಲಿ  ಸುಮಾರು 183 ಕೋಟಿ ರೂ.ಗಳ ವೆಚ್ಚದಲ್ಲಿ, 13 ಎಕರೆ ವಿಸ್ತೀರ್ಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೆಗಾ ಡೇರಿಯು ಸಂಪೂರ್ಣ ಮಾನವ ರಹಿತವಾಗಿದ್ದು, ದಿನಂಪ್ರತಿ 6 ಲಕ್ಷ ಲೀಟರ್ ಸಾಮಾರ್ಥ್ಯ ಹೊಂದಿದ್ದು, 9 ಲಕ್ಷ ಲೀಟರ್ ವರೆಗೂ ವಿಸ್ತರಿಸಬಹುದಾಗಿದ್ದು, ನೂತನ ತಂತ್ರಜ್ಞಾನವನ್ನು ಅಳವಡಿಸಿರುವ ಸ್ವೀಡನ್ ದೇಶದ ಯಂತ್ರೋಪಕರಣಗಳನ್ನು ಬಳಸಲಾಗಿದ್ದು, ಶುದ್ಧತೆ, ಶುಚಿತ್ವಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ, ಇದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು, ಹಾಲಿನ ವಿವಿಧ ಉತ್ಪನ್ನಗಳು ಲಭ್ಯವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

2 ಲಕ್ಷ 13 ಸಾವಿರ ಜನ ಒಟ್ಟಾರೆ ಸದಸ್ಯರಿದ್ದಾರೆ, ಹಾಲು ಉತ್ಪಾದಕರಿಗೆ 6 ರೂ.ಗಳಿಗೆ ಪ್ರೋತ್ಸಾಹ ಧನ ಹೆಚ್ಚಿಸಲಾಗುವುದು, 1 ಲಕ್ಷ 70 ಸಾವಿರ ಜನ ಹಾಲು ಉತ್ಪಾದಕರನ್ನು ಹೊಂದಲಾಗಿದೆ, ಈ ಮೆಗಾ ಡೇರಿಯು ಸಂಪೂರ್ಣ ಯಂತ್ರ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸಲಿದೆ, ಗಂಟೆಗೆ 5 ಸಾವಿರ ಲೀಟರ್ ಹಾಲು ಶೇಖರಿಸಲಾಗುವುದು ಹಾಗೂ 3 ಸಾವಿರ ಲೀಟರ್ ವರೆಗೂ ಪ್ಯಾಕಿಂಗ್ ನಡೆಸಲಾಗುವುದು ಎಂದು ತಿಳಿಸಿದರು.

ಟೋನ್ಡ್, ಹೋಮೋಜೆನೈಸ್ಡ್, ಎನ್.ಎಂ.ಎಸ್. ಕೌ ಮಿಲ್ಕು ಗಳು, ಸೇರಿದಂತೆ ಮೊಸರು, ಲಸ್ಸಿ, ಮಜ್ಜಿಗೆ, ಕಪ್ ಕರ್ಡ್, ತುಪ್ಪ, ಮೈಸೂರು ಪಾಕ್, ಬರ್ಫಿ, ಪೇಡಾ, ಕೇಸರ್ ಪೇಡಾ, ಪನ್ನೀರ್, ಐಸ್ ಕ್ರೀಮ್, ಬೆಣ್ಣೆ, ಖೋವಾ ಮುಂತಾದ ಉತ್ಪನ್ನಗಳು ಲಭ್ಯವಾಗಲಿವೆ 18 ರಿಂದ 20 ಕೋಟಿ ರೂ.ಗಳ ವಾರ್ಷಿಕ ಲಾಭದ ನಿರೀಕ್ಷೆಯಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮೈಮುಲ್ ಅಧ್ಯಕ್ಷ ಕೆ.ಜಿ.ಮಹೇಶ್, ಅಳಗಂಜಿ, ಕೆ.ಸಿ.ಬಲರಾಮ್, ಲೀಲಾ ನಾಗರಾಜ್, ಎ.ಟಿ.ಸೋಮಶೇಖರ್ ಮೊದಲಾದವರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: