ಮೈಸೂರು

ಮನೆಯ ಮುಂದೆ ಕಟ್ಟಿದ್ದ ಹಸುವನ್ನು ಕದ್ದೊಯ್ದ ಚಾಲಾಕಿ ಕಳ್ಳರು

ಮೈಸೂರು,ಫೆ.28:- ನಗರದಲ್ಲಿ ಹಸುಕಳ್ಳರು ಹೆಚ್ಚಾಗಿದ್ದು, ಹಸುವನ್ನು ಸಾಕಿಕೊಂಡಿರುವ ಮಾಲೀಕರ ನಿದ್ದೆಗೆಡಿಸಿದೆ. ಯಾದವಗಿರಿ ಯಲ್ಲಿ ಹಸು ಕಳ್ಳತನ ನಡೆದಿದ್ದು, ಮಾಜಿ ಮೇಯರ್ ಬಿ.ಜೆ. ಪ್ರಕಾಶ್ ಅವರ ಮನೆ ಮುಂಭಾಗದ ಮಹದೇವನಾಯಕ ಅವರಿಗೆ ಸೇರಿದ ಹಸುವನ್ನು ಚಾಲಾಕಿ ಕಳ್ಳರು ಕದ್ದೊಯ್ದಿದ್ದಾರೆ.

ವಿವಿಪುರಂ ಠಾಣೆ ವ್ಯಾಪ್ತಿಯ ಯಾದವಗಿರಿ ಅರಳಿಮರದ ಬಳಿಯಲ್ಲಿರುವ ಮನೆಯ ಮುಂದೆ ಕಟ್ಡಿದ್ದ ಹಸುವನ್ನು ಚಾಲಾಕಿ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿದ್ದಾರೆ. 50 ಸಾವಿರ ರೂ.ಮೌಲ್ಯದ ಹಸು ಇದಾಗಿದ್ದು, ಇತ್ತೀಚಿಗೆ ಒಂಟಿಕೊಪ್ಪಲು,ಪಡುವಾರಹಳ್ಳಿ ಭಾಗದಲ್ಲಿ ಹಸು ಕಳ್ಳತನ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: