ಮೈಸೂರು

ಹಸು ಕಳವು ಯತ್ನ : ಇಬ್ಬರ ಬಂಧನ

ಹ‌ಸುಗ‌ಳ‌ನ್ನು ಕಳ್ಳತನದಿಂದ ಕೊಂಡೊಯ್ಯುವಾಗ, ವಾಹನ ಸಮೇತ ಹಸುಗಳನ್ನು ಗ್ರಾಮ‌ಸ್ಧ‌ರೇ ಹಿಡಿದು ಪೋಲಿಸ‌ರಿಗೆ ಒಪ್ಪಿಸಿರುವ‌ ಘ‌ಟ‌ನೆ ಹುಣ‌ಸೂರು ಮೈಸೂರು ರ‌ಸ್ತೆಯ‌ ಸೋಮ‌ನ‌ಹ‌ಳ್ಳಿ ಗ್ರಾಮ‌ದ‌ ಬ‌ಳಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ರ‌ಝಾಕ್ ಮೊಹ‌ಲ್ಲಾದ‌ ನಿವಾಸಿ ಫಾಷ‌  ಮ‌ಗ‌ ಫಾರುಕ್ ಪಾಷ‌ ಹಾಗೂ ವೆಂಕ‌ಟ‌ರಾವ್ ‌ ಮ‌ಗ‌ ವೆಂಕಟೇಶ್ ಎಂದು ಗುರುತಿಸಲಾಗಿದೆ.

ಇಲ್ಲಿನ‌ ಕ‌ರೀಗೌಡ‌ರ‌ ಬೀದಿಯ‌ ನಾರಾಯ‌ಣ‌ ಮ‌ತ್ತು ಉಮೇಶ‌ ಎಂಬವ‌ರಿಗೆ ಸೇರಿದ‌ ನಾಲ್ಕು ದ‌ನ‌ಗ‌ಳ‌ನ್ನು ದ‌ನ‌ದ‌ ಕೊಟ್ಟಿಗೆಯಿಂದ‌ ಕ‌ದ್ದು ಸಾಗಿಸುವಾಗ‌ ತಾಲೂಕಿನ‌ ಸೋಮ‌ನ‌ಹ‌ಳ್ಳಿ ಗ್ರಾಮ‌ದ‌ ಗೇಟ್ ಬ‌ಳಿ ಅನುಮಾನ‌ಸ್ಪ‌ದ‌ವಾಗಿ ತಿರುಗುತ್ತಿದ್ದ‌ ವಾಹ‌ನ‌ವ‌ನ್ನು ಅಡ್ಡ‌ಗಟ್ಟಿದ ಸ್ಥಳೀಯರು ವಾಹನವನ್ನು ಪರಿಶೀಲಿಸಲಾಗಿ ಅದರಲ್ಲಿ ಹಸು ಹಾಗೂ ಕರುಗಳಿರುವುದು ಕಂಡು ಬಂತು.

ವಾಹನವನ್ನು ಅಡ್ಡಗಟ್ಟಿ ನಿಲ್ಲಿಸುತ್ತಿದಂತೆಯೇ ಚಾಲಕ ಮತ್ತು ಕ್ಲೀನರ್ ಪರಾರಿಯಾಗಿದ್ದರು. ಇದೀಗ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Leave a Reply

comments

Related Articles

error: