ಪ್ರಮುಖ ಸುದ್ದಿಮೈಸೂರು

ಮೈಸೂರಿನಲ್ಲಿ ಆದಿವಾಸಿಗಳ ಐತಿಹಾಸಿಕ ಸಮಾವೇಶ ‘ಫೆ.1ರಂದು’

ಆದಿವಾಸಿಗಳ ಐತಿಹಾಸಿಕ ಸಮಾವೇಶ ಫೆ.1ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಪ್ರಕಟಿಸಿದ್ದಾರೆ.

ರಾಜ್ಯದ 6 ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಾಸಿಸುವ ವಿವಿಧ ಆದಿವಾಸಿಗಳಿಗೆ ಪೌಷ್ಠಿಕ ಆಹಾರ ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಸುಮಾರು 41 ಸಾವಿರ ಆದಿವಾಸಿಗಳ ಕುಟುಂಬಗಳಿಗೆ ಮಳೆ ಹಾಗೂ ಇತರೇ ಪ್ರಾಕೃತಿಕ ವೈಪರಿತ್ಯದಿಂದಾಗಿ ವರ್ಷದ 6 ತಿಂಗಳ ಅವಧಿಗೆ ಪೌಷ್ಠಿಕ ಆಹಾರ ಹಾಗೂ ಕಸುಬಿನಿಂದ ವಂಚಿತರಾಗುವರು ಸಮಸ್ಯೆಯ ಗಂಭೀರತೆಯನ್ನು ಅರಿತಿರುವ ಸರ್ಕಾರ ಪ್ರತಿ ತಿಂಗಳ ಪಡಿತರದಲ್ಲಿ ಅಕ್ಕಿ, ಜೋಳ, ಮೊಟ್ಟೆ, ಅಡುಗೆ ಎಣ್ಣೆ, ವಿವಿಧ ಬಗೆಯ ಬೇಳೆ ಕಾಳುಗಳು ಹಾಗೂ 1 ಕೆಜಿ ನಂದಿನಿ ತುಪ್ಪವನ್ನು ಒದಗಿಸಲಾಗುತ್ತಿದೆ. ಈ ಯೋಜನೆಯ ವ್ಯಾಪ್ತಿಯನ್ನು ಮತ್ತಷ್ಟು ಪ್ರಚುರಪಡಿಸಿ ಆದಿವಾಸಿಗಳ ಅಭ್ಯುದಯಕ್ಕೆ ಸಮಾವೇಶವನ್ನು ಮೈಸೂರಿನಲ್ಲಿಯೇ ನಡೆಸಲಾಗುವುದು. ಮೈಸೂರು ಆದಿವಾಸಿಗಳ ರಾಜಧಾನಿಯಿದ್ದಂತೆ ಎಂದು ತಿಳಿಸಿ ಸಮಾವೇಶದ ಸದುಪಯೋಗವನ್ನು ಏಳು ಜಿಲ್ಲೆಗಳ ಆದಿವಾಸಿಗಳು ಪಡೆಯಬೇಕೆಂದು ಕೋರಿದ್ದಾರೆ.

Leave a Reply

comments

Related Articles

error: