ಸುದ್ದಿ ಸಂಕ್ಷಿಪ್ತ

ಇಂದು ಚಿಂದೋಡಿ ಲೀಲಾರವರ ನೆನಪಿನ ‘ರಂಗಸಂಜೆ’

ಮೈಸೂರು,ಫೆ.28 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕದಂಬ ರಂಗ ವೇದಿಕೆ ಸಂಯುಕ್ತವಾಗಿ ಹಿರಿಯ ರಂಗಕಲಾವಿದೆ ಚಿಂದೋಡಿ ಲೀಲಾ ಅವರ ರಂಗಯಾನ ‘ರಂಗ ಸಂಜೆ’ ಅನ್ನು ಇಂದು ಸಂಜೆ 5 ಗಂಟೆಗೆ ಅರಮನೆ ಉತ್ತರದ್ವಾರದಲ್ಲಿರುವ ಕಸಾಪ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಹಿರಿಯ ರಂಗತಜ್ಞ ಡಾ.ಕಿಕ್ಕೇರಿ ವೀರನಾರಾಯಣ ಉದ್ಘಾಟಿಸುವರು, ಉಪನ್ಯಾಸಕಿ ಡಾ.ವಿನೋದಮ್ಮ ವಿಷಯ ಮಂಡಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಪ್ರಾಸ್ತಾವಿಕವಾಗಿ ಮಾತನಾಡುವರು. (ಕೆ.ಎಂ.ಆರ್)

Leave a Reply

comments

Related Articles

error: