ಪ್ರಮುಖ ಸುದ್ದಿಮೈಸೂರು

ವೈದ್ಯರು ರೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಿ : ಸಚಿವ ರಮೇಶ್ ಕುಮಾರ್

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ನಂಜನಗೂಡು ನಗರದ ಹಳೆ ಆಸ್ಪತ್ರೆ ಆವರಣದಲ್ಲಿ 8 ಕೋಟಿ 25ಲಕ್ಷ ವೆಚ್ಚದಲ್ಲಿ  30 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ರಮೇಶ್ ಕುಮಾರ್ ಉದ್ಘಾಟಿಸಿದರು.

ರಿಬ್ಬನ್ ಕತ್ತರಿಸುವ ಮೂಲಕ ಆಸ್ಪತ್ರೆಯನ್ನು ಸಚಿವ ರಮೇಶ್ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  ಪ್ರಜಾಪ್ರಭುತ್ವದ ಮಹತ್ವ ಪರಿಣಾಮಕಾರಿಯಾಗಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ  ಶರೀರಕ್ಕೆ ರೋಗ ಬಂದರೆ ಔಷಧಿ ಇದೆ ಆದರ ಇಂದು ಸಮಾಜದಲ್ಲಿರುವ ಮನಸ್ಸಿಗೆ ರೋಗ ಬಂದಿದೆ, ಕೆಲವೇ ದಿನಗಳಲ್ಲಿ ಆಶಾ ಕಾರ್ಯಕರ್ತೆಯರ  ಸಮಸ್ಯೆಯನ್ನು ಪರಿಹರಿಸಲಾಗುವುದು  ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕು. ವೈದ್ಯರು ಆಸ್ಪತ್ರೆಗೆ ಬರುವ ಜನರೊಡನೆ ಪ್ರೀತಿಯಿಂದ ಸಮಾಲೋಚಿಸಬೇಕು. ಆಸ್ಪತ್ರೆ ಒಂದು ದೇವಾಲಯ ವಿದ್ದಂತೆ. ದೇವರು ಮಂದಿರ,ಮಸೀದಿ,ಚರ್ಚು ಗಳಲ್ಲಿ ಇದ್ದಾನೋ, ಇಲ್ಲವೋ ತಿಳಿಯದು. ಆದರೆ ಆಸ್ಪತ್ರೆಯಲ್ಲಿ ವೈದ್ಯರ ಜೊತೆ ಇದ್ದಾನೆ. ವೈದ್ಯರು ರೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಿ ಎಂದರು. ಕಾರ್ಯಕ್ರಮದಲ್ಲಿ ಸಂಸದ ಧ್ರುವನಾರಾಯಣ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನಾ, ತಹಶೀಲ್ದಾರ್ ದಯಾನಂದ್, ಜಿ.ಪಂ ಸದಸ್ಯೆ ಪುಷ್ಪ ನಾಗೇಶ್, ನಗರಸಭೆ ಅಧ್ಯಕ್ಷೆ ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತ ಜೊತೆ ಮಾತನಾಡಿದ ರಮೇಶ್ ಕುಮಾರ,  ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇನ್ನು ಒಂದು ತಿಂಗಳ ಒಳಗೆ ಅರೆ ವೈದ್ಯರ ಕೊರತೆ ಇರುವುದಿಲ್ಲ ಈಗಾಗಲೇ 2001 ಜನರ ನೇಮಕಾತಿನ್ನು ಮಾಡಿಕೊಂಡಿದ್ದೇವೆ. ರಾಜ್ಯದಲ್ಲಿ 2350 ಪ್ರಾಥಮಿಕ ಕೇಂದ್ರಗಳಿದ್ದು 800 ಜನ ತಜ್ಞ ವೈದ್ಯರ ಕೊರತೆ ಇದೆ. ಕೊರತೆ ನೀಗಿಸಲು ನಾವು ಸಿದ್ದ. ಆದರೆ ಅವರು ಬರಬೇಕು ಅವರ ಮೇಲೂ ಸಮಾಜದ ಋಣವಿದೆ. ಅದನ್ನು ಅರಿತು ಬರಬೇಕು. ಗುತ್ತಿಗೆ ಆಧಾರದಲ್ಲಿ ಬಂದರೆ 1ಲಕ್ಷ ನೀಡಲು ಸಿದ್ಧರಿದ್ದೇವೆ ಅಥವಾ ನಾವು ಕರೆದಾಗ ಬಂದು ಕೆಲಸ ಮಾಡಿ ಕೇಸಿಗೆ ತಕ್ಕಂತೆ ಹಣ ಕೇಳಿದರೂ ನೀಡಲು ಸಿದ್ದರಿದ್ದೇವೆ ಎಂದು ತಿಳಿಸಿದರು.

ಡಯಾಲಿಸಿಸ್ ಮಾಡುವುದನ್ನು ಹೊರಗುತ್ತಿಗೆಗೆ ನೀಡಿದ ರೀತಿಯಲ್ಲೆ ಸಿ.ಟಿ ಸ್ಕ್ಯಾನ್ ಹಾಗೂ ಎಂ.ಆರ್,ಐ ಗಳನ್ನು ಹೊರ ಗುತ್ತಿಗೆಗೆ ನೀಡುತ್ತೇವೆ. ಇದನ್ನು ಮಾರ್ಚ ಅಂತ್ಯದೊಳಗೆ ಪೂರ್ಣಗೊಳಿಸುತ್ತೇವೆ. ಉಳ್ಳವರಿಗೆ ಪ್ರಭಾವ ಶಾಲಿಗಳಿಗೆ ಬಗ್ಗುವಂತ ಬಲಹೀನ ಸರ್ಕಾರ ನಮ್ಮದಲ್ಲ. ನಾವೇನಿದ್ದರು ಬಗ್ಗಿದರೆ ಅದು ಜನತೆಗೆ ಮಾತ್ರ ಎಂದು ತಿಳಿಸಿದರು.

Leave a Reply

comments

Related Articles

error: