ದೇಶಪ್ರಮುಖ ಸುದ್ದಿ

ಒಡಿಶಾ ತೀರದಲ್ಲಿ ಅತ್ಯಾಧುನಿಕ ಕ್ಷಿಪಣಿಗಳ ಪ್ರಯೋಗ ಪರೀಕ್ಷೆ ಯಶಸ್ವಿ

ಬಾಲಸೋರ್ (ಒಡಿಶಾ), ಫೆ.28:  ಒಡಿಶಾ ಕಡಲ ತೀರದಲ್ಲಿ ಎರಡು ಅತ್ಯಾಧುನಿಕ ಕ್ಷಿಪಣಿಗಳ ಪ್ರಯೋಗದ ಪರೀಕ್ಷೆಯನ್ನು ಡಿಆರ್‍ಡಿಒ ಯಶಸ್ವಿಯಾಗಿದೆ. ಬಾಲಸೋರ್ ಜಿಲ್ಲೆಯ ಚಾಂದಿಪುರ್ ನಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ಮಂಗಳವಾರದಂದು ಈ ಕ್ಷಿಪಣಿಗಳ ಪರೀಕ್ಷೆ ನಡೆಸಲಾಯಿತು.

ಭೂಮೇಲ್ಮೆಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಡಿಆರ್‍ಡಿಒ ವಿನ್ಯಾಸಗೊಳಿಸಿದೆ. 15 ಕಿ.ಮೀ ವ್ಯಾಪ್ತಿಯಲ್ಲಿರುವ ಬಹುಸ್ತರ ಗುರಿಯನ್ನು ನಿಖರವಾಗಿ ಮುಟ್ಟಿ ಕ್ಷಣಾರ್ಧದಲ್ಲಿ ನಾಶ ಪಡಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

@DefenceMinIndia congratulates @DRDO_India 4 successful test firing of indigenous QRSAM (Quick Reaction Surface to Air Msls) demonstrating robust control, aerodynamics & manoeuvring capabilities. @nsitharaman conveys her appreciation to the team on achieving all main objective pic.twitter.com/lNvLDQTvu8
Defence Spokesperson (@SpokespersonMoD) February 26, 2019

ಭಾರತದಲ್ಲಿರುವ ಮಧ್ಯಮ ಶ್ರೇಣಿಯಲ್ಲಿರುವ ಕ್ಷಿಪಣಿಗಳಿಗೆ ಇದು ಪೂರಕವಾಗಿವೆ. ನೌಕೆಗಳ ಮೇಲೆ ನಡೆಯುವ ದಾಳಿಯನ್ನು ಪಡೆಯಲು ಅಥವಾ ಭೂಸೇನೆ ಬಳಕೆಗೂ ಇದನ್ನು ಬಳಸಬಹುದು ಎಂದು ಡಿಆರ್ ಡಿ ಒ ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಜೈಪುರದ ಮರಭೂಮಿಯಲ್ಲಿ 7 ಕಿ. ಮೀ ದೂರದ ಗುರಿಯನ್ನು ತಲುಪಬಹುದಾದ ಶಸ್ತ್ರಸಜ್ಜಿತ ಮಿಲಿಟರಿ ವಾಹನಗಳನ್ನು ಹೊಡೆಯಲು ಮತ್ತು ನಾಶಮಾಡಲು ವಿನ್ಯಾಸಗೊಳಿಸಲಾಗಿರುವ ‘ನಾಗ್’ ಕ್ಷಿಪಣಿಯ ಪ್ರಯೋಗ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ವಿಜ್ಞಾನ ನಗರಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಾನವ ರಹಿತ ಯುದ್ಧ ವಿಮಾನಗಳ ಪರೀಕ್ಷಾರ್ಥ ವಾಯುನೆಲೆ ಕೂಡಾ ಈಗ ಡಿಆರ್ ಡಿಒನ ಪರೀಕ್ಷೆ, ಪ್ರಯೋಗಕ್ಕೆ ಮುಕ್ತವಾಗಿರುವುದನ್ನು ಇಲ್ಲಿ ಸ್ಮರಿಸಬಹುದು. (ಎನ್.ಬಿ)

Leave a Reply

comments

Related Articles

error: