ಕರ್ನಾಟಕಪ್ರಮುಖ ಸುದ್ದಿ

ವಾಟ್ಸ್‌ಅಪ್‍ಗೆ ಜಿಯೊ ಸೆಡ್ಡು! ಹೊಸ ಆ್ಯಪ್ ಲಾಂಚ್

ಬೆಂಗಳೂರು (ಫೆ.28): ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ ರಿಲಯನ್ಸ್ ಜಿಯೋ ಇದೀಗ ಮತ್ತೊಂದು ವಿಶಿಷ್ಟ ಆಪ್ ಅನ್ನು ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಡಿಜಿಟಲ್ ಪ್ರಪಂಚದ ಎಲ್ಲಾ ಸೇವೆಗಳನ್ನು ತನ್ನಡಿಯಲ್ಲಿ ತರಲು ಪ್ರಯತ್ನಿಸುತ್ತಿರುವ ಜಿಯೋ, ಹೊಸದಾಗಿ ‘ಜಿಯೋ ಗ್ರೂಪ್ ಟಾಕ್’ ಎಂಬ ವಿಶೇಷ ಆಪ್ ಅನ್ನು ಪರಿಚಯಿಸಿದೆ.

ಈ ‘ಜಿಯೋ ಗ್ರೂಪ್ ಟಾಕ್’ ಆಪ್ ಮೂಲಕ ಗುಂಪು ಕಾನ್ಫರೆನ್ಸ್ ಕರೆಗಳನ್ನು ಮಾಡಲು ಬಳಸಬಹುದಾಗಿದ್ದು, ಟೆಕ್ ಬಗ್ಗೆ ಹೆಚ್ಚು ತಿಳಿಯದವರೂ ಸಹ ಸುಲಭವಾಗಿ ಗುಂಪು ಅಥವಾ ಬಹು ಕರೆಗಳಿಗೆ ಆಪ್ ಅನ್ನು ಬಳಸಬಹುದಾಗಿದ್ದು ಎಂದು ಹೇಳಲಾಗಿದೆ. 10 ಜನರಿಗೆ ಒಂದು ಸಮಯದಲ್ಲಿ ಒಂದೇ ಬಾರಿ ಕರೆ ಮಾಡಬಹುದಾದ ವಿಶಿಷ್ಟ ಫೀಚರ್ ಅನ್ನು ಆಪ್‌ನಲ್ಲಿ ನೀಡಲಾಗಿದೆ.

ಅಂತರ್ಜಾಲ ಆಧಾರಿತ ಕರೆ ವೈಶಿಷ್ಟ್ಯಗಳನ್ನು ಹೊಂದಿರುವ ಈ ‘ಗ್ರೂಪ್ ಟಾಕ್’ ಆಪ್ ಮೂಲಕ ಗ್ರಾಹಕರು ಗುಂಪನ್ನು ರಚಿಸುವುದು, ಗ್ರಾಹಕರ ಸಂಪರ್ಕದಿಂದ ಜನರನ್ನು ಸೇರಿಸಿ ಕರೆ ಮಾಡಲು ಮತ್ತು ಗ್ರಾಹಕರು 10 ಜನರನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಕಾನ್ಫರೆನ್ಸ್ ಕರೆಗಳನ್ನು ಮಾಡಬಹುದಾದ ಅನೇಕ ಫೀಚರ್ಸ್‌ಗಳನ್ನು ಒದಗಿಸಿರುವ ಮಾಹಿತಿ ನೀಡಲಾಗಿದೆ.

ವಾಟ್ಸಪ್‌ನೊಂದಿಗೆ ಆಪ್ ಅನ್ನು ಹೋಲಿಸಿದರೆ, ಕೇವಲ ಗುಂಪು ಕಾನ್ಫರೆನ್ಸ್ ಕರೆಗಳನ್ನು ಮಾಡಲು ಬಳಸಬಹುದಾದ ಈ ಗ್ರೂಪ್ ಟಾಕ್ ಆ್ಯಪ್ ವಿಶೇಷವಾಗಿ ಕಾಣುತ್ತಿದೆ. ಆದರೆ, ವಾಟ್ಸಪ್‌ನಲ್ಲಿ ಇರುವ ಇನ್ನಿತರ ವೈಶಿಷ್ಟ್ಯಗಳು ಮತ್ತು ವೀಡಿಯೊ ಮತ್ತು ಧ್ವನಿ ಕರೆಗಳ ನಡುವೆ ಬದಲಾಯಿಸಲು ಅನುಮತಿ ಈ ಆಪ್‌ನಲ್ಲಿ ಇಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಾಟ್ಸ್‌ಆಪ್‌ನಷ್ಟು ಫೀಚರ್ಸ್ ಇಲ್ಲದಿದ್ದರೂ ಸಹ ಈ ಆ್ಯಪ್ ಗುಂಪು ಕಾನ್ಫರೆನ್ಸ್ ಮೂಲಕ ವಾಟ್ಸ್‌ಆಪ್‌ಗೆ ಕಠಿಣ ಸ್ಪರ್ಧೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇನ್ನು ಆ್ಯಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಬ್ಬರಿಗೂ ಲಭ್ಯವಿರುವ ಈ ಆ್ಯಪ್ ಈಗಾಗಲೇ ಪ್ಲೇಸ್ಟೋರ್‌ನಲ್ಲಿ ಬೀಡುಬಿಟ್ಟಿದ್ದು, ಆ್ಯಪ್ ಬಳಸಲು, ಬಳಕೆದಾರರು ಜಿಯೋ ಸಂಖ್ಯೆಯನ್ನು ಹೊಂದಿರಬೇಕು. (ಎನ್.ಬಿ)

Leave a Reply

comments

Related Articles

error: