ಮೈಸೂರು

35 ಲಕ್ಷ ರೂ. ಕಾಮಗಾರಿಗೆ ಶಾಸಕ ಎಸ್.ಎ. ರಾಮದಾಸ್ ಗುದ್ದಲಿ ಪೂಜೆ

ಮೈಸೂರು,ಫೆ.28:- ಮಹಾನಗರಪಾಲಿಕೆ ವ್ಯಾಪ್ತಿಯ  ವಾರ್ಡ್  ನಂ- 57 ಕುವೆಂಪುನಗರದ ಮನುಜಪಥ 1ನೇ ಅಡ್ಡರಸ್ತೆ ಹಾಗೂ ಗಂಗೆ ರಸ್ತೆ 2 ಮತ್ತು 3ನೇ ಅಡ್ಡರಸ್ತೆಗಳಲ್ಲಿಂದು ಚರಂಡಿ ನಿರ್ಮಾಣಕ್ಕಾಗಿ ಗುದ್ದಲಿಪೂಜೆಯನ್ನು ಮಾಡಿ  35 ಲಕ್ಷ ರೂ. ಕಾಮಗಾರಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್   ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ  ನಗರ ಪಾಲಿಕೆ ಸದಸ್ಯರಾದ ಎಂ.ಸಿ. ರಮೇಶ್  , ಡಿಪೋ ರವಿ, ನಂಜುಂಡನಾಯಕ, ದಾಸೇಗೌಡ, ಹನುಮಂತರಾವ್, ನಾಗರಾಜು, ರಾಜಣ್ಣ, ರಾಮಯ್ಯ,  ವಲಯ 3ರ ಅಭಿವೃದ್ಧಿ ಅಧಿಕಾರಿ ಗಂಗಾಧರ್, ಪದ್ಮಪ್ರಿಯ, ವೆಂಕಟೇಶ್, ರಾಜಣ್ಣ ಮತ್ತು ಬಡಾವಣೆಯ ಪ್ರಮುಖರು ಹಾಗೂ ನಿವಾಸಿಗಳು ಹಾಜರಿದ್ದರು. (ಎಸ್.ಎಚ್)

Leave a Reply

comments

Related Articles

error: