ಮೈಸೂರು

ದೇಶಕ್ಕಾಗಿ ಓಟ : ಸಾರ್ವಜನಿಕರಲ್ಲಿ ಅರಿವು ಜಾಥಾ

ಕೇಂದ್ರ ಸರ್ಕಾರದ ಹೊಸ ಯೋಜನೆಗಳು ಸಾರ್ವಜನಿಕರನ್ನು ತಲುಪುವ ನಿಟ್ಟಿನಲ್ಲಿ ಅರಿವು ಮೂಡಿಸಲು ಬಿಇಎಂಎಲ್ ಮೈಸೂರು ಶಾಖೆ ವತಿಯಿಂದ ಭಾನುವಾರ ಮೈಸೂರಿನಲ್ಲಿ ದೇಶಕ್ಕಾಗಿ ಓಟ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಬಳಿ ಓಟಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಬಿಇಎಂಎಲ್ ನ ಮಾರುಕಟ್ಟೆ ಮುಖ್ಯಸ್ಥ ವಿಶ್ವನಾಥ ಮಾತನಾಡಿ ನಮ್ಮ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ನಗದು ರಹಿತ ವ್ಯವಹಾರಕ್ಕೆ ಈಗಾಗಲೇ ಚಾಲನೆ ದೊರಕಿದ್ದು, ಸಾರ್ವಜನಿಕರಿಗೆ ಇದರ ಸಂಪೂರ್ಣ ಅರಿವಾಗಬೇಕು ಎನ್ನುವ ದೃಷ್ಟಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ಓಟ ಹಮ್ಮಿಕೊಳ್ಳಲಾಗಿದೆ ಎಂದರು.

ದೇಶಕ್ಕಾಗಿ ಓಟ ಜಾಥಾವು ಕೋಟೆ ಆಂಜನೇಯ ದೇವಸ್ಥಾನದಿಂದ ಹೊರಟು ಅರಸು ರಸ್ತೆ, ಮಹಾರಾಜಾ ಮೈದಾನ, ಪಾಠಶಾಲಾ ವೃತ್ತ, ಆರ್.ಗೇಟ್ ಮೂಲಕ ಸಾಗಿ ಮತ್ತೆ ಕೋಟೆ ಆಂಜನೇಯ ಬಳಿ ಸಮಾಪ್ತಿಗೊಂಡಿತು.

ಇದರಲ್ಲಿ ಬೇಗ ತಲುಪಿದ 10ಮಂದಿಯನ್ನು ಗುರುತಿಸಿ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಬಿಇಎಂಎಲ್ ನ ಮೈಸೂರು ಮುಖ್ಯಸ್ಥ ಶಂಕರ್, ಮುರಳಿ ಮತ್ತಿತರರು ಉಪಸ್ಥಿತರಿದ್ದರು. ಓಟದಲ್ಲಿ 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: