ಕ್ರೀಡೆಮೈಸೂರು

ಅಂತರ ಕಾಲೇಜು ಪುರುಷರ ಕ್ರೀಡಾಕೂಟ : ಬಾಲ್ ಬ್ಯಾಡ್ಮಿಂಟನ್ ನಲ್ಲಿ ಜೆಎಸ್ ಎಸ್ ಕಾಲೇಜ್ ಪ್ರಥಮ

ಮೈಸೂರು,ಫೆ.28:- ಮಂಡ್ಯದ ಪಿಇಎಸ್ ಬಿ.ಎಡ್ ಕಾಲೇಜಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ 2018-19 ನೇ ಸಾಲಿನ ಅಂತರವಲಯ ಅಂತರ ಕಾಲೇಜು ಪುರುಷರ ಕ್ರೀಡಾಕೂಟದಲ್ಲಿ ಮೈಸೂರು ನಗರದ ಬಿ.ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಬಾಲ್‍ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಥ್ರೋಬಾಲ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ಪಂದ್ಯಾವಳಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಮುಖ್ಯಕಾರ್ಯನಿರ್ವಾಹಕರಾದ ಪ್ರೊ. ಬಿ.ವಿ ಸಾಂಬಶಿವಯ್ಯ , ಪ್ರಾಂಶುಪಾಲರಾದ    ಪ್ರೊ. ಎಂ.ಮಹದೇವಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾದ   ಎಂ ಕಾರ್ತಿಕ್‍ ಹಾಗೂ  ಬೋಧಕ/ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: