ಮೈಸೂರು

ಮೂರು ವಾರಗಳಲ್ಲಿ ಉತ್ತರ ನೀಡಲು ಆದೇಶ

ದೇವರಾಜ ಮಾರುಕಟ್ಟೆಯನ್ನು ಕೆಡವುವ ಅಥವಾ ಪುನರುಜ್ಜೀವನಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮುಂದಿನ ಮೂರು ವಾರಗಳಲ್ಲಿ ಸೂಕ್ತ ಉತ್ತರ ನೀಡಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.

ದೇವರಾಜ ಮಾರುಕಟ್ಟೆಯನ್ನು ಕೆಡವದಂತೆ ಕಳೆದ ನವೆಂಬರ್ 28 ರಂದು ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್,  ಇದೀಗ ಸರ್ಕಾರಕ್ಕೆ ದೇವರಾಜ ಮಾರುಕಟ್ಟೆಯನ್ನು ಕೆಡವುವ ಅಥವಾ ಪುನರುಜ್ಜೀವನ ಮಾಡುವ ಸಂಬಂಧ ಸೂಕ್ತ ವರದಿ ನೀಡುವಂತೆ ಸೂಚನೆ ನೀಡಿದೆ.

ಸರ್ಕಾರ ಮುಂದಿನ ಮೂರು ವಾರಗಳಲ್ಲಿ ಯಾವುದೇ ಆಕ್ಷೇಪ, ಹೇಳಿಕೆ ನೀಡದಿದ್ದಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ಕೋರ್ಟ್ ಗೆ ಖುದ್ದು ಹಾಜರಾಗುವಂತೆ ಆದೇಶಿಸಲಾಗಿದ್ದು,  ವಿಚಾರಣೆಯನ್ನು ಜ.25 ಕ್ಕೆ ಮುಂದೂಡಿದೆ.

Leave a Reply

comments

Related Articles

error: