ಸುದ್ದಿ ಸಂಕ್ಷಿಪ್ತ

ಮಾ.2ರಂದು ಅರಿವು ಕಾರ್ಯಕ್ರಮ

ಮೈಸೂರು ಫೆ.28 : ಟಿ.ನರಸೀಪುರ ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಸರ್ಕಾರ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ಗೊಲ್ಲ ಸಮುದಾಯದವರಲ್ಲಿ ಇರುವ ಮಾಢನಂಬಿಕೆಯನ್ನು ಹೋಗಲಾಡಿಸುವ ಹಾಗೂ ಇತರೆ ಅಲೆಮಾರಿ/ಅರೆ ಅಲೆಮಾರಿ ಸಮುದಾಯದವರುಗಳಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ  ಬಗ್ಗೆ ಮಾರ್ಚ್ 2 ರಂದು ಸಂಜೆ 4 ಗಂಟೆಗೆ ಹೆಳವರಹುಂಡಿ ಗ್ರಾಮದಲ್ಲಿರುವ ಹೆಳವ ಸಮುದಾಯದವರು ವಾಸವಾಗಿರುವ ಬಡಾವಣೆಯ ಶ್ರೀಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಈ ಸಮುದಾಯದ ಜನಾಂಗದವರಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಸಭೆಯನ್ನು ಆಯೋಜಿಸಿಲಾಗಿದೆ.

ಸಭೆಗೆ ಅಲೆಮಾರಿ/ಅರೆ ಅಲೆಮಾರಿ ಸಮುದಾಯದ ಜನಾಂಗದವರಾದ ಗೊಲ್ಲ, ಹೆಳವ, ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಯೋಜನ ಪಡೆಯಲು ಟಿ.ನರಸೀಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಕ್ರಟಣೆಯಲ್ಲಿ ತಿಳಿಸಿರುತ್ತಾರೆ. (ಕೆ.ಎಂ.ಆರ್)

Leave a Reply

comments

Related Articles

error: