ಪ್ರಮುಖ ಸುದ್ದಿಮೈಸೂರು

ಹೈದ್ರಾಬಾದ್ ಗೆ ಸಂಪರ್ಕ ಕಲ್ಪಿಸುವ ಕಾಚೀಗುಡ-ಬೆಂಗಳೂರು ಸಿಟಿ ಡೈಲಿ ಎಕ್ಸ್ ಪ್ರೆಸ್ ಮೈಸೂರಿಗೆ ವಿಸ್ತರಣೆ : ಸಚಿವ ಪಿಯೂಶ್ ಗೋಯಲ್ ಗೆ ಧನ್ಯವಾದ ಅರ್ಪಿಸಿದ ಸಂಸದ

ಮೈಸೂರು,ಮಾ.1:- ಹೈದ್ರಾಬಾದ್ ಗೆ  ಸಂಪರ್ಕ ಕಲ್ಪಿಸುವ 12785/86 ಕಾಚೀಗುಡ-ಬೆಂಗಳೂರು ಸಿಟಿ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರಿನವರೆಗೆ ವಿಸ್ತರಣೆಗೊಂಡಿದ್ದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರಿಗೆ ಸಂಸದ ಪ್ರತಾಪ್ ಸಿಂಹ ಧನ್ಯವಾದಗಳನ್ನು ತಿಳಿಸಿದ್ದಾರೆ.

ರೈಲ್ವೆ ಇಲಾಖೆಯು ಕಳೆದ 27ರಂದು ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ರಾತ್ರಿ 7.5ಕ್ಕೆ ಕಾಚೀಗುಡ ಬಿಡುವ ರೈಲು ಬೆಳಿಗ್ಗೆ 6.25ಕ್ಕೆ ಬೆಂಗಳೂರಿಗೆ ಬರಲಿದ್ದು, ಅಲ್ಲಿಂದ 6.40ಕ್ಕೆ ಹೊರಟು 9.45ಕ್ಕೆ ಮೈಸೂರಿನ ಅಶೋಕಪುರಂಗೆ ಬರಲಿದೆ. ಅಲ್ಲಿಂದ ವಾಪಸ್ ಮಧ್ಯಾಹ್ನ 2.45ಕ್ಕೆ ಹೊರಟು ಕಾಚೀಗುಡ ನಿಲ್ದಾಣಕ್ಕೆ ಬೆಳಿಗ್ಗೆ 5.40ಕ್ಕೆ ತಲುಪಲಿದೆ. ಕೆಂಗೇರಿ, ರಾಮನಗರ ಮತ್ತು ಮಂಡ್ಯದಲ್ಲಿ ಇದು ನಿಲುಗಡೆಯಾಗಲಿದೆ. ಸಾಂಸ್ಕೃತಿಕ ನಗರ ಮೈಸೂರಿನ ಪ್ರವಾಸೋದ್ಯಮ ಹಾಗೂ ಕೈಗಾರಿಕೋದ್ಯಮವನ್ನು ಅಭಿವೃದ್ಧಿ ಪಡಿಸುವ ಹಾಗೂ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಬೆಂಗಳೂರಿನಿಂದ ದಿನನಿತ್ಯ ಪ್ರಯಾಣ ಬಯಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮೈಸೂರಿಗೆ ಸಂಪರ್ಕಿಸುವಂತೆ ಕೋರಿ ಸಂಸದ ಪ್ರತಾಪ್ ಸಿಂಹ   06/02/2019ರಂದು ನವ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.  ಇದಕ್ಕೆ ಪೂರಕವಾಗಿ   ಕೇಂದ್ರ ಸಚಿವ ಗೋಯಲ್  12785/86 ಕಾಚೀಗುಡ-ಬೆಂಗಳೂರು ಸಿಟಿ ಡೈಲಿ ಎಕ್ಸ್ ಪ್ರೆಸ್ ಟ್ರೈನ್ ಅನ್ನು ವಿಸ್ತರಿಸುವ ಮೂಲಕ ನೇರವಾಗಿ ಮೈಸೂರಿಗೆ ಸಂಪರ್ಕಿಸಲು ಅನುಮೋದನೆ ನೀಡಿದ್ದಾರೆ.  ಪ್ರಧಾನ ಮಂತ್ರಿಗಳಾದ   ನರೇಂದ್ರ ಮೋದಿಜೀ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಪಿಯೂಶ್ ಗೋಯಲ್ ಅವರಿಗೆ ಸಂಸದ ಪ್ರತಾಪ್ ಸಿಂಹ ಧನ್ಯವಾದ ಸಮರ್ಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: