
ಬೆಂಗಳೂರು (ಮಾ.1): ಪ್ರಧಾನಿ ಮೋದಿ ಅವರಿಗೆ ಮಾಜಿ ಸಂಸದೆ ರಮ್ಯಾ ಅವರು ನಾಲ್ಕು ಪ್ರಶ್ನೆಗಳನ್ನು ಕೇಳಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಪುಲ್ವಾಮ, ಏರ್ ಸ್ಟ್ರೈಕ್, ವಿಂಗ್ ಕಮಾಂಡರ್ ಅಭಿನಂದನ್ ವಿಚಾರಗಳನ್ನು ಪ್ರಸ್ತಾಪ ಮಾಡಿ ಇದು ಗುಪ್ತಚರದ ವೈಫಲ್ಯ ಎಂದು ಆರೋಪ ಮಾಡಿದ್ದಾರೆ.
ರಮ್ಯಾ ಎಸೆದಿರುವ ಪ್ರಶ್ನೆಗಳು:
- ಜೈಷೆ ಮೊಹಮ್ಮದ್ ಸಂಘನೆ ಉಗ್ರ ಸಂಘಟನೆಯ ದಾಳಿ ಮಾಡಿದ್ದೀರಿ, ಇದರಲ್ಲಿ ಎಷ್ಟು ಉಗ್ರರು ಹತರಾಗಿದ್ದಾರೆ ಎಂಬುದನ್ನು ಅಧಿಕೃತ ಮಾಹಿತಿ ನೀಡಿ ಎಂದು ಕೇಳಿದ್ದಾರೆ.
- ಹೊಸ ಗುಪ್ತಚರ ಮಾಹಿತಿ ಮೇಲೆ ಬಾಲ್ ಕೋಟ್ ಮೇಲೆ ದಾಳಿ ನಡೆದಿದ್ದರೆ, ಅದೇ ಗುಪ್ತಚರ ವಿಭಾಗ ಪುಲ್ವಾಮ ದಾಳಿಯ ಬಗ್ಗೆ ಯಾಕೆ ಮಾಹಿತಿ ಕೊಡಲಿಲ್ಲ, ಅವರು ಮಾಹಿತಿ ಕೊಟ್ಟಿದ್ದರೆ ಮೊದಲೇ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
- ಪ್ರಧಾನಿ ಮೋದಿ ಮತ್ತು ಎನ್ ಎಸ್ ಎ ಅಜಿತ್ ದೋವೆಲ್ ಇಬ್ಬರೇ ರಕ್ಷಣಾ ಸಚಿವರಿಗೆ ಗಮನಕ್ಕೆ ತರದೇ ಪ್ಲಾನ್ ಮಾಡಿದ್ರು ಅನ್ನೋ ವರದಿ ಇದೆ, ನಿಜವೇ? ಎಂದು ಪ್ರಶ್ನಿಸಿದ್ದಾರೆ.
- ಯುದ್ದ ಸ್ಮಾರಕ ಉದ್ಘಾಟನೆಯನ್ನು ವಿಪಕ್ಷಗಳನ್ನು ಟೀಕಿಸಲು ಬಳಸಿದ್ದೀರಿ. ಆದರೆ ದಾಳಿಯ ವಾಸ್ತಾಂಶ ತಿಳಿಸದೇ ಮೌನವಾಗಿದ್ದು ಏಕೆ? ನಮಗೆ ಸತ್ಯ ಕೇಳುವ ಹಕ್ಕು ಇಲ್ಲವೇ, ಮಾಧ್ಯಮಗಳಿಂದಲೂ ರಕ್ಷಣಾ ಮತ್ತು ಗೃಹಸಚಿವರು ಯಾಕೆ ದೂರವೇ ಇದ್ದಾರೆ? ಎಂದು ಪ್ರಧಾನಿ ಮೋದಿಗೆ ರಮ್ಯಾ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ. (ಎನ್.ಬಿ)