ಕ್ರೀಡೆದೇಶ

ಕಮಾಂಡರ್ ಸುರಕ್ಷಿತ ವಾಪಸಾತಿಗಾಗಿ ಟೀಂ ಇಂಡಿಯಾ ಕ್ರಿಕೆಟಿಗರ ಟ್ವೀಟ್

ಬೆಂಗಳೂರು (ಮಾ.1): ಪುಲ್ವಾಮಾ ದಾಳಿಗೆ ಪ್ರತೀಕಾರಾರ್ಥವಾಗಿ ನಡೆದ ವಾಯುದಾಳಿಯ ಬಳಿಕ ಭಾರತದೊಳಕ್ಕೆ ಬಂದ ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸುವ ವೇಳೆ ಪಾಕಿಸ್ತಾನದ ಪ್ರದೇಶದಲ್ಲಿ ಇಳಿದು ಸೆರೆಯಾಗಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ದಮಾನ್ ಅವರ ಬಿಡುಗಡೆಗಾಗಿ ಭಾರತೀಯ ಕ್ರಿಕೆಟಿಗರು ಟ್ವೀಟ್ ಮೂಲಕ ಪ್ರಾರ್ಥಿಸಿದ್ದಾರೆ.

ಪಾಕಿಸ್ತಾನ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವ ವೇಳೆ ಪಾಕಿಸ್ತಾನದಲ್ಲಿ ಸೆರೆ ಸಿಕ್ಕ ಭಾರತೀಯ ವಿಂಗ್ ಕಮಾಂಡರ್ ಬಿಡುಗಡೆಗೆ ದೇಶದೆಲ್ಲೆಡೆ ಪೂಜೆ ನಡೆಯುತ್ತಿದೆ. ಟೀಂ ಇಂಡಿಯಾ ಕ್ರಿಕೆಟಿಗರು ಭಾರತೀಯ ಯೋಧ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಪಾರ್ಥಿಸಿದ್ದಾರೆ.

ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ವಿಂಗ್ ಕಮಾಂಡರ್ ಅಭಿನವ್ ವರ್ದಮಾನ್ ಅವರನ್ನು  ಮಾ.1ರಂದು ಬಿಡುಗಡೆ ಮಾಡುವುದಾಗಿ ನಿನ್ನೆಯೇ ಪಾಕಿಸ್ತಾನ ಸಂಸತ್‍ಗೆ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: