ಕರ್ನಾಟಕದೇಶ

ಮಂಡ್ಯ ಯೋಧ ಹುತಾತ್ಮನಾದಾಗ ಮಾತಾಡ್ಲಿಲ್ಲ, ಈಗ್ಯಾಕೆ ಮಾತು? ರಮ್ಯಾಗೆ ಟ್ವಿಟ್ಟಿಗರ ಟಾಂಗ್!

ಬೆಂಗಳೂರು (ಮಾ.1): ಭಾರತೀಯ ವಾಯುಸೇನೆ ವಿಂಗ್ ಕಮಾಂಡ್ ಅಭಿನಂದನ್ ಪಾಕ್ ವಶದಲ್ಲಿರುವ ಬಗ್ಗೆ ಪ್ರಧಾನಿ ಮೋದಿಯನ್ನು ಟೀಕಿಸಿದ ನಟಿ, ಕಾಂಗ್ರೆಸ್ ನಾಯಕಿ ರಮ್ಯಾಗೆ ಟ್ವಿಟರಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಏನಾಯ್ತು ಭಾರತೀಯ ಜೂಟ್ ಪಾರ್ಟಿ? ನಿಮ್ಮ ನಾಯಕರು ಅಷ್ಟೊಂದು ಚಾಣಕ್ಯರಲ್ಲವೇ? ಯಾವಾಗ ನಮ್ಮ ವಿಂಗ್ ಕಮಾಂಡರ್ ಭಾರತಕ್ಕೆ ಮರಳುತ್ತಾರೆಂಬ ಮಾತು ಪ್ರಧಾನಿ ಬಾಯಿಯಿಂದ ಯಾವಾಗ ಬರುತ್ತದೆಂದು ಕೇಳಲು ಕಾಯುತ್ತಿದ್ದೇವೆ’ ಎಂದು ರಮ್ಯಾ ಟ್ವೀಟ್ ಮಾಡಿದ್ದರು.

ಇದಕ್ಕೆ ಟ್ವಿಟರಿಗರು ಆಕ್ರೋಶದಿಂದಲೇ ಪ್ರತಿಕ್ರಿಯಿಸಿದ್ದು, ಮೊದಲು ನೀವು ಯಾವ ದೇಶದಲ್ಲಿದ್ದೀರೆಂದು ನೆನಪಿನಲ್ಲಿರಲಿ. ಇಲ್ಲೇ ಇದ್ದುಕೊಂಡು ಇದೇ ದೇಶದ ಪ್ರಧಾನಿ ಬಗ್ಗೆ ಗೌರವಿಸಲು ಕಲಿಯಿರಿ. ನಿಮ್ಮ ಪಕ್ಷದವರು ಅಧಿಕಾರದಲ್ಲಿದ್ದಾಗ ಇಂತಹ ದಾಳಿಗಳಾದರೆ ನಿಮ್ಮ ನಾಯಕರ ಬಾಯಿಯಿಂದ ಎಂತಹಾ ಮಾತುಗಳು ಬರುತ್ತಿದ್ದವು ಎಂಬುದನ್ನು ನೆನಪಿಸಿಕೊಳ್ಳಿ ಎಂದು ಕೆಲವರು ರಮ್ಯಾಗೆ ಲೇವಡಿ ಮಾಡಿದ್ದಾರೆ.

ಇನ್ನು ಕೆಲವರು ಮಂಡ್ಯದವರೇ ಆಗಿದ್ದುಕೊಂಡು ಅಲ್ಲಿನ ಯೋಧ ಗುರು ಹುತಾತ್ಮನಾದಾಗ ಸಣ್ಣ ಸಂತಾಪವೂ ವ್ಯಕ್ತಪಡಿಸದ ರಮ್ಯಾ ಈಗ ಏಕೆ ವಿಂಗ್ ಕಮಾಂಡರ್ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: