ಪ್ರಮುಖ ಸುದ್ದಿಮೈಸೂರು

ಪೂರ್ವಗ್ರಹ ಪೀಡಿತ ವಿವೇಚನ ರಹಿತ ವರದಿಗಳ ವೈಭವವೇ ಹೆಚ್ಚಾಗಿದೆ : ಬಿ.ವಿ.ಮಲ್ಲಿಕಾರ್ಜುನಯ್ಯ

ಎರಡು ದಿನಗಳ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನಕ್ಕೆ ಸುತ್ತೂರಿನಲ್ಲಿ ಚಾಲನೆ

ಸುತ್ತೂರು, ಮಾ.1 : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದೊಂದಿಗೆ  ಶ್ರೀಕ್ಷೇತ್ರ ಸುತ್ತೂರಿನಲ್ಲಿ ಇಂದು ಮತ್ತು ನಾಳೆ ನಡೆಯುತ್ತಿರು  34ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ವೇದಿಕೆ  ಉದ್ಘಾಟನಾ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ. ಆದಿಚುಂಚನಗಿರಿ ಮಠದ   ಶ್ರೀ ನಿರ್ಮಾಲನಂದ ಸ್ವಾಮೀಜಿ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮೈಸೂರು-ಚಾಮರಾಜನಗರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಟಿ.ಹರೀಶ್ ಗೌಡ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು. ಜಿಲ್ಲಾಧ್ಯಕ್ಷ ಸಿ.ಕೆ.ಮಹೇಂದ್ರ ಮತ್ತಿತರರು ದೀಪ ಬೆಳಗಿಸಿ ನಂತರ ಹಸ್ತಾಕ್ಷರ ಹಾಕುವ ಮೂಲಕ ಚಾಲನೆ ನೀಡಲಾಯಿತು.

ಉದ್ಘಾಟನೆ ನಂತರ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಅವರು ಮಾತನಾಡಿ, ಪತ್ರಿಕೆಗಳ ಸಂಖ್ಯೆ ಆಗಿದ್ದರೂ ಒಗ್ಗೂಡದೆ ಅಸಂಘಟಿತರಾಗುತ್ತಿದ್ದು ಹಲವು ಸಂಕೀರ್ಣ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ವಾತಂತ್ರ್ಯ ವರದಿಗಾರಿಕೆ ಇಲ್ಲವಾಗುತ್ತಿದೆ. ಪೂರ್ವಗ್ರಹ ಪೀಡಿತ, ವಿವೇಚನೆ‌ ಇಲ್ಲದೇ ವರದಿಗಳು ಹೆಚ್ಚಾಗುತ್ತಿದ್ದು, ಸಂವಿಧಾನದ ನಾಲ್ಕನೇ ಅಂಗ ಎನ್ನುವ‌ ನಂಬಿಕೆ ಕಡಿಮೆಯಾಗುತ್ತಿದೆ. ಇದರಿಂದ‌ ವೃತ್ತಿ ಗೌರವ ಕಡಿಮೆಯಾಗುತ್ತಿದೆ. ಪತ್ರಕರ್ತ ರ ಮೇಲಿನ ಹಲ್ಲೆ ನಡೆಯುತ್ತಿದೆ. ಅದನ್ನು ಸಿಐಡಿಗೆ ವಹಿಸುವ ಕಾರ್ಯ ನಡೆಯಬೇಕಿದೆ ಎಂದು ತಿಳಿಸಿದರು.

ಡಿ.ವಿ.ಗುಂಡಪ್ಪ ಅವರು ಸಂಘವನ್ನು ಸ್ಥಾಪಿಸಿದರು. ಅನೇಕ ಗಣ್ಯರು ಸಂಘವನ್ನು ಕಷ್ಟ ‌ಪಟ್ಟು ಕಟ್ಟಿದ್ದಾರೆ. ಆರೋಗ್ಯ ವಿಮೆ ಸೇರಿದಂತೆ‌‌ ಅನೇಕ ಸೌಲಭ್ಯಗಳು ದೊರೆತಿವೆ. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ 10 ಸಾವಿರ ರೂ. ಮಾಶಾಸನ ದೊರೆತಿದೆ, ವೇತನ‌ ಮಂಡಳಿಗಳನ್ನು ರಚಿಸಲು ಹೋರಾಟ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸಂಘಕ್ಕೆ ಬೆಂಗಳೂರಿನಲ್ಲಿ ನಿವೇಶನ ದೊರೆತಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು,  ಜನಮಾನಸಕ್ಕೆ ಮಾದ್ಯಮ ಈಗ ಮುಖ್ಯವಾಗಿದೆ ಲೇಖನಿಗೆ ಹರಿತವಾದ ಶಕ್ತಿ ಇದೆ. ನಿಮ್ಮ ಶಕ್ತಿಯನ್ನು ಲೆಕ್ಕಿಸದೆ ಸುದ್ದಿಯನ್ನು ಹೆಕ್ಕಿ ತರಬೇಕಾತ್ತದೆ. ಶಾಸನಗಳು ಜಾರಿಗೊಳ್ಳಲು, ಸಮಾಜದಲ್ಲಿನ ಅನ್ಯಾಯ, ಆಡಳಿತಗಾರರನ್ನು ಎಚ್ಷರಿಸುವ‌ ಕೆಲಸವನ್ನು ಮಾಡಬೇಕು. ಮಾಧ್ಯಮ ಕೂಡಾ ನಾಗ ಲೋಟದಲ್ಲಿ ಓಡುತ್ತಿದ್ದು ಸ್ಪರ್ಧೆಯಲ್ಲಿ ಎಚ್ಚರ ಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯವಾಗುತ್ತದೆ.  ತಪ್ಪಿದ ವರದಿಯನ್ನು ಸರಿ ಪಡಿಸುವ ವರದಿಯಿಂದ ‌ಆದ ಪರಿಣಾಮವನ್ನು ಮತ್ತೆ ಮರುವರದಿ ಮಾಡುವ‌‌ ಕಾರ್ಯ ಆಗಬೇಕಿದೆ. ಈ ದಿಟ್ಟಿನಲ್ಲಿ ಚಿಂತನೆ ನಡೆಯಬೇಕಿದೆ. ಹಾಗಾಗಿ ಪತ್ರಕರ್ತರಿಗೆ ಜವಾಬ್ದಾರಿ ‌ಹೆಚ್ಚಿರಬೇಕು, ಜನರ ಜ್ಞಾನ ವನ್ನು ವಿಸ್ತರಿಸುವ ಕೆಲಸ‌ ಮಾಡಬೇಕಿದೆ ಎಂದರು (ವರದಿ : ಕೆ.ಎಂ.ಆರ್)

Leave a Reply

comments

Related Articles

error: