ಮೈಸೂರು

ಛಾಯಾಚಿತ್ರ ಪ್ರದರ್ಶನಕ್ಕೆ ಮೈಸೂರಿನಲ್ಲಿ ಚಾಲನೆ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ : ಅರಣ್ಯ ರಕ್ಷಣೆಗೆ ಕರೆ

ಮೈಸೂರು,ಮಾ.1:- ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನ ಹಿನ್ನೆಲೆ  ಮೈಸೂರಿನಲ್ಲಿ ಮೂರು ಕಾಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ `ಲೈಫ್ ಆನ್ ದಿ ವೈಲ್ಡ್ ಸೈಡ್’ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ನಟ ದರ್ಶನ್ ಸೆರೆ ಹಿಡಿದ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನವನ್ನು ಅರಣ್ಯ ಇಲಾಖೆಯ ಸಹಯೋಗದಲ್ಲಿ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸಂದೇಶ್ ನಾಗರಾಜು ಚಾಲನೆ ನೀಡಿದರು. ಪ್ರದರ್ಶನದಲ್ಲಿ ದರ್ಶನ್ ಕಾಡಿನಲ್ಲಿ ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ವನ್ಯಜೀವಿ ಸಂರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು   ದರ್ಶನ್ ಪ್ರದರ್ಶನ ಏರ್ಪಡಿಸಿದ್ದು, ತಮ್ಮ ಚಿತ್ರಗಳ ಪ್ರದರ್ಶನದ ಜೊತೆಗೆ ಮಾರಾಟವನ್ನು ಆಯೋಜನೆ ಮಾಡಿದ್ದಾರೆ. ಪ್ರತಿ ಚಿತ್ರಕ್ಕೆ 2000 ಬೆಲೆ ನಿಗದಿಪಡಿಸಲಾಗಿದೆ. ಪೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಪಡೆಯಲು 500 ಹೆಚ್ಚುವರಿ ಹಣ ನಿಗದಿಪಡಿಸಲಾಗಿದೆ. ಮೂರು ದಿನಗಳು ಪ್ರದರ್ಶನದ ಜಾಗದಲ್ಲಿ ಇದ್ದು   ದರ್ಶನ್ ಆಟೋಗ್ರಾಫ್ ನೀಡಲಿದ್ದಾರೆ.  ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ   ಛಾಯಾಚಿತ್ರ ಪ್ರದರ್ಶನ ನಡೆಯಲಿದ್ದು, ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಪೋಟೋಗಳನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು ಒಂದು ಒಳ್ಳೆಯ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಿದ್ದೇವೆ. ಇದರಲ್ಲಿ ಬಂದ ಹಣವನ್ನು ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇವೆ. ನನಗೆ ಛಾಯಾಚಿತ್ರದ ಬಗ್ಗೆ ಅರಿವೇ ಇರಲಿಲ್ಲ. ಆ ನಂತರ ನನ್ನ ಸ್ನೇಹಿತರು ಇದರ ಹುಚ್ಚು ಹಿಡಿಸಿದರು. ಕಬಿನಿ, ಕೇರಳ ಸೇರಿದಂತೆ ಹಲವೆಡೆ ಓಡಾಡಿ ಈ ಚಿತ್ರಗಳನ್ನು ಸೆರೆಹಿಡಿದಿದ್ದೇನೆ. ಕಾಡಿನಲ್ಲಿ ಪ್ರಾಣಿಗಳನ್ನು ನೋಡೋದೆ ಒಂದು ಚಾಲೆಂಜಿಂಗ್‌. ಆ ಅನುಭವದ ಮುಂದೆ ಬೇರೇನೂ ಇಲ್ಲ. ಅಪರೂಪದ ಕ್ಷಣಗಳಿಗೆ ಕಾಡಿನ ಪ್ರವಾಸ ಸಾಕ್ಷಿಯಾಗಿದೆ. ಮನಸ್ಸಿಗೆ ನೆಮ್ಮದಿ ಸಿಗುತ್ತೆ, ತಾಳ್ಮೆ ಕಲಿಯಬಹುದು. ಎಲ್ಲರು ಕಾಡು ಉಳಿಸಿ ಇಲ್ಲದಿದ್ದರೆ ಮುಂದೆ ಪ್ರಾಣಿಗಳನ್ನು ಪೋಟೋದಲ್ಲೆ ನೋಡಬೇಕಾಗುತ್ತೆ. ಅದಕ್ಕಾದರೂ ಕಾಡನ್ನು ಸಂರಕ್ಷಿಸೋಣ  ಎಂದು  ಛಾಯಾಚಿತ್ರ ಪ್ರದರ್ಶನದ ಮೂಲಕ ಅರಣ್ಯ ರಕ್ಷಣೆಗೆ ಕರೆ ನೀಡಿದರು.

ಈ ಸಂದರ್ಭ ಅರಣ್ಯ ಅಧಿಕಾರಿಗಳಾದ ಎಡುಕುಂಡಲು, ಮೃಗಾಲಯ ಸಿಇಓ ಅಜಿತ್ ಕುಲಕರ್ಣಿ, ಡಿಎಫ್ ಓಗಳಾದ ಸಿದ್ದರಾಮಪ್ಪ,  ಪ್ರಶಾಂತ್ ಸೇರಿ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: